ಹುಟ್ಟುತ್ತಾ ಅಣ್ಣತಮ್ಮಂದಿರು ಬೆಳೆಯುತ್ತಾ ದಾಯಾಧಿಗಳು ಅನ್ನೋ ಗಾದೆ ಮಾತಿದೆ ಅದಕ್ಕೆ ಸಾಕ್ಷಿಭೂತವೆಂಬತೆ ಇಲ್ಲೊಂದು ಘಟನೆ ಆಗಿದೆ. ಸ್ವಂತ ಅಣ್ಣನ ಮನೆಗೆ ಬೆಂಕಿ ಹಚ್ಚಲು ಹೋಗಿ ತಾನೇ ಆ ಬೆಂಕಿಯಲ್ಲಿ ಸುಟ್ಟು ಇದೀಗ ಆಸ್ಪತ್ರೆ ಪಲಾಗಿದ್ದಾನೆ. ಅಷ್ಟಕ್ಕೂ ಎಲ್ಲಿ ಎನಿ ಘಟನೆ ಅಂತೀರಾ ಈ ಸ್ಟೋರಿ ನೋಡಿ..
ಸ್ವಂತ ಅಣ್ಣನಾ ಮನೆಗೆ ಬೆಂಕಿ ಹಚ್ಚಿ ಅದೇ ಬೆಂಕಿಯಲ್ಲಿ ಬೆಂದ ತಮ್ಮ!
ಮಾಡಿದ್ದುಣ್ಣೋ ಮಾರಾಯ ಅಂತಾರಲ್ಲ ಅಂತಾದ್ದೆ ಒಂದು ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಗೋವಿಂದಪುರದಲ್ಲಿ ನೆಡೆದಿದೆ. ಗೋವಿಂದಾಪುರದ ನಿವಾಸಿಯಾದ ಅಂಜಿನಪ್ಪ ಎಂಬತನಿಗೆ ಮೂರು ಜನ ಮಕ್ಕಳು ಮೊದಲ ಮಗಳು ಲಕ್ಷ್ಮಿ ಎರಡನೇ ಮಗ ರಾಮಕೃಷ್ಣ ಮೂರನೇ ಮಗ ಮುನಿರಾಜು. ಮಗಳು ಲಕ್ಷ್ಮಿ ಎಂಬಾಕೆಗೆ ಮದುವೆ ಮಾಡಿ ಕೊಟ್ಟು ಗಂಡನ ಮನೆ ಸೇರಿದ್ದಳು.. ಇನ್ನ ಉಳಿದ ಅಂಜಿನಪ್ಪ ಹಾಗೂ ಇಬ್ಬರ ಮಕ್ಕಳಿಗೂ ಮದುವೆ ಮಾಡಿ ಚಿಕ್ಕ ಕುಟುಂಬ ಚೊಕ್ಕ ಕುಟುಂಬ ಎಂಬಂತೆ ವಾಸ ಮಾಡಿ ಜೀವನ ಸಾಗಿಸುತ್ತಿದ್ದರು. ಆದ್ರೆ ಬೇಗ ದುಡ್ಡು ಮಾಡಬೇಕು ಅನ್ನೋ ಮಾಯೆಯಲ್ಲಿ ಬಿದ್ದ ಕಿರಿ ಮಗ ಮುನಿರಾಜು ಊರಲ್ಲಿ ಪಟಾಕಿ ಚೀಟಿ ಆ ವ್ಯವಹಾರ ಈ ವ್ಯವಹಾರ ಅಂತಾ ಸಾಲ ಮಾಡಿ ಕೈ ಸುತ್ತುಕೊಂಡಿದ್ದ..
ಊರೆಲ್ಲ ಸಾಲ ಮಾಡಿ ಕೈ ಸುಟ್ಟುಕೊಂಡಿದ್ದ ಮುನಿರಾಜನಿಗೆ ದುಡ್ಡು ಕೊಟ್ಟೋರು ಸುಮ್ನೆ ಬಿಡ್ತಾರಾ.. ಪ್ರತಿ ದಿನ ಮನೆಬಳಿ ಬಂದು ಜಗಳ ಮಾಡ್ತಿದ್ರು ಆದ್ರೆ ಹೆತ್ತ ಕರುಳು ಕೇಳ್ಬೇಕಲ್ವಾ ಅಂಜಿನಪ್ಪ ಮತ್ತು ಅಣ್ಣ ರಾಮಕೃಷ್ಣ ಇದ್ದ ಸ್ವಲ್ಪ ಜಮೀನು ಓಡವೆ ಮಾರಿ ಸಾಲ ತೀರಿಸಿದ್ದಾರಂತೆ, ಆದ್ರೂ ಹಾಗಾಗ್ಗೆ ಮನೆಗೆ ಬಂದು ಅಸ್ಥಿಯಲ್ಲಿ ನನ್ನ ಪಾಲು ಬೇಕು ಅಂತಾ ಕ್ಯಾತೆ ತೆಗಿತಿದ್ನಂತೆ ಯಾವಾಗ ಇದ್ದ ಸ್ವಲ್ಪ ಅಸ್ತಿ ಮಾರಿ ಕೊಟ್ಟಿದ್ದೇವೆ ಮತ್ತೆ ಇರೋದನ್ನು ಹಾಳು ಮಾಡ್ತಾನೆoಭಾ ಭಾವನೆಯಲ್ಲಿ ಕೊಡಲ್ಲ ಅಂದಿದ್ದಾರೆ. ಆಗ್ಲೇ ಕಂಡಿದ್ದು ನೋಡಿ ದುಷ್ಟ ತಮ್ಮನ ಮತ್ತೊಂದು ಮುಖ..
ಕಳೆದ ಮದ್ಯ ರಾತ್ರಿ 1:30ರ ಸುಮಾರಿಗೆ ಪೆಟ್ರೋಲ್ ತಂದು ತನ್ನ ಅಣ್ಣ ರಾಮಕೃಷ್ಣ ಮತ್ತು ಅತ್ತಿಗೆ ಸವಿತಾ ಮತ್ತು ಮಗು ಅನ್ನೋದನ್ನು ಲೆಕ್ಕಿಸದೆ ಮನೆಗೆ ಚಿಲಕ ಹಾಕಿ ಕಿಟಕಿಯಿಂದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.. ಆದ್ರೆ ಕರ್ಮ ಇಸ್ ಬ್ಯಾಕ್ ಅಂತಾರಲ್ಲ ಹಾಗೇ ಅದೇ ಬೆಂಕಿ ತನಗೂ ತಗುಲಿ ಕಾಪಾಡಿ ಕಾಪಾಡಿ ಅಂತಾ ಬೊಬ್ಬೆ ಹಾಕಿದ್ದಾನೆ.. ಯಾವಾಗ ಕಾಪಾಡಿ ಕಾಪಾಡಿ ಅಂತಾ ಕಿರುಚಲು ಪ್ರಾರಂಭಿಸಿದನೋ ನೆರೆ ಹೊರೆಯವರು ಬಂದು ಬೆಂಕಿ ಆರಿಸಿ ಆಸ್ಪತ್ರೆ ಸೇರಿಸಿದ್ದಾರೆ..
ಒಟ್ಟಾರೆ ಇನ್ನು ಬಾಳಿ ಬದುಕಬೇಕಿದ್ದ ಮಗು ಅನ್ನೋದು ಲೆಕ್ಕಿಸದೆ ಇಂತಹ ದುಸ್ರುತ್ಯ ಎಸಗಿದ ಮುನಿರಾಜನಾ ವಿರುದ್ಧ ಈಗ ತಿರುಮಲ ಶೆಟ್ಟಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದ್ದು ಮಾಡಿದ್ದುಣ್ಣೋ ಮಾರಾಯ ಅನ್ನೋ ಹಾಗಾಗಿದೆ.