ತಾಯಿ ಪ್ರೀತಿಯಿಂದ ಕೊಡಿಸಿದ್ದ ಬೈಕ್ ಕದ್ದು ಪರಾರಿಯಾದ ಕಳ್ಳ!
ಹೌದು, ತನ್ನ ತಾಯಿ ಮಗನಿಗೆ ಪ್ರೀತಿಯಿಂದ ಕೊಡಿಸಿದ್ದ ಬೈಕ್ ನ್ನು ಕಳ್ಳ ಕದ್ದು ಪರಾರಿಯಾಗಿರುವ ಘಟನೆ ನಡೆದಿದೆ. ಬೆಂಗಳೂರಿನ ಕುಮಾರಸ್ವಾಮಿ ಲೇ ಔಟ್ ವಿಠಲ್ ನಗರದಲ್ಲಿ ಘಟನೆ ನಡೆದಿದ್ದು, ನವೀನ್ ಕುಮಾರ್ ಎಂಬಾತನಿಗೆ ತನ್ನ ತಾಯಿ ಹದಿನೈದು ವರ್ಷದ ಹಿಂದೆ ಈ ಬೈಕ್ ಗಿಪ್ಟ್ ಆಗಿ ಕೊಡಿಸಿದ್ರಂತೆ.
ಆದರೆ ಅವರ ತಾಯಿ ಕೆಲ ತಿಂಗಳುಗಳ ಹಿಂದೆ ಸಾವನ್ನಪ್ಪಿದ್ದು, ಅವರ ನೆನಪನ್ನು ಬೈಕ್ ನಲ್ಲಿ ಕಾಣುತ್ತಿದ್ದ ಕುಮಾರ್ ಸದ್ಯಕ್ಕೆ ಬೈಕ್ ಕಳುವಾಗಿರುವುದನ್ನು ನೆನೆದು ಕಣ್ಣೀರಿಡುತ್ತಿದ್ದಾನೆ. ಮನೆ ಮುಂದೆ ನಿಲ್ಲಿಸಿರುವ ವೇಳೆ ಡಿಯೋ ಬೈಕ್ ಕಳುವಾಗಿದ್ದು, ಕಳ್ಳನ ಕೈಚಳಕ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ಕುಮಾರಸ್ವಾಮಿ ಲೇ ಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.