ಸಮಗ್ರ ಸುದ್ದಿ

ಚಿನ್ನಲೇಪಿತ ಉತ್ಸವಮೂರ್ತಿ : ಹೊತ್ತು ಸಾಗುವಳು ಮಹಿಳಾಮೂರ್ತಿ!

Share It

ಹೌದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದಲ್ಲಿನ ಶ್ರೀ ಚೌಡೇಶ್ವರಿ ದೇವಾಲಯದ 13 ನೇ ವಾರ್ಷಿಕೋತ್ಸವ ಏರ್ಪಡಿಸಲಾಗಿದ್ದು, ಏಪ್ರಿಲ್ 19 ಮತ್ತು 20 ನೇ ತಾರೀಖಿನಂದು ವಾರ್ಷಿಕೋತ್ಸವದ ಪ್ರಯುಕ್ತ ವಿಶೇಷ ಪೂಜೆ ಮತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ದೇವಾಲಯ ನಿರ್ಮಾಣವಾಗಿ ಒಂದು ಮಂಡಳ ಸಂಪೂರ್ಣವಾಗಿರುವ ಪ್ರಯುಕ್ತ ಈ ಭಾರಿಯ ವಾರ್ಷಿಕೋತ್ಸವ ವಿಶೇಷವಾಗಿ & ಅದ್ಧೂರಿಯಾಗಿ ಹಮ್ಮಿಕೊಳ್ಳಲಾಗಿದ್ದು, ಏ.19 ರಂದು ಬೆಳಿಗ್ಗೆ 7 ಗಂಟೆಗೆ ಗಂಗಾಪೂಜೆ, ಮಹಾಸಂಕಲ್ಪ, ಒಂದು ಗಂಟೆ ಕಾಲ ವಿಶೇಷ ಮಂಗಳ ದ್ರವ್ಯಗಳಿಂದ ಮಹಾ ಅಭಿಷೇಕ. ಸಂಜೆ 6 ಗಂಟೆಗೆ SYS ಸಂಸ್ಥೆಯವರಿಂದ ಭಜನೆ, ಸಂಜೆ 7 ಗಂಟೆಗೆ ವಾಸುಕಿ ಪೂಜೆ ಮತ್ತು ಮಂಡಲಾರಾಧನೆ ಹಾಗೂ ರಾತ್ರಿ 8 ಗಂಟೆಗೆ ಮಹಾಮಂಗಳಾರತಿ ಏರ್ಪಡಿಸಲಾಗಿದೆ.

ಇದರೊಂದಿಗೆ ಏ.20 ರಂದು ಬೆಳಿಗ್ಗೆ 7 ರಿಂದ ಬೆಳಿಗ್ಗೆ 9 ಗಂಟೆಯವರೆಗೆ ಪ್ರತ್ಯಂಗಿರ ಹೋಮ ಹಮ್ಮಿಕೊಳ್ಳಲಾಗಿದೆ. ಹೋಮದಲ್ಲಿ ನಂದಗೋಕುಲ ಧಾರವಾಹಿ ಮುಖ್ಯ ನಟಿ ಮೀನಾ ಸಹ ಭಾಗವಹಿಸಲಿದ್ದಾರೆ. ಜೊತೆಗೆ ಚೌಡೇಶ್ವರಿ ಅಮ್ಮನವರಿಗೆ ಪ್ರತ್ಯಂಗಿರ ಅಲಂಕಾರ ಮಾಡಲಾಗುತ್ತದೆ. ಇನ್ನು ಮಧ್ಯಾಹ್ನ 2 ಗಂಟೆಗೆ ಶಶಿಕಲಾ ಅಶ್ವತ್ಥಪ್ಪ ಗುರೂಜಿ ಅಕ್ಕ ಹಾಗೂ ರವಿಚಂದ್ರ ಗುರೂಜಿ ಸಾರಥ್ಯದಲ್ಲಿ ಸಹಜ ಅಷ್ಠಾಂಗ ಯೋಗ ಸಮಿತಿಯಿಂದ ಸತ್ಸಂಗ ಭಜನೆ ಏರ್ಪಡಿಸಲಾಗಿದೆ.

ಉತ್ಸವಮೂರ್ತಿ ಹೊತ್ತು ಸಾಗುವಳು ಮಹಿಳಾಮೂರ್ತಿ

ಮಂಡಲದ ನಂತರ ನಡೆಯುತ್ತಿರುವ ಈ ಭಾರಿಯ ವಾರ್ಷಿಕೋತ್ಸವ ದಲ್ಲಿ ಅಮ್ಮನವರ ಚಿನ್ನಲೇಪಿತ ಉತ್ಸವಮೂರ್ತಿ ಯನ್ನು ಹೆಣ್ಣುಮಕ್ಕಳೇ ನಗರದ ರಾಜ ಬೀದಿಗಳಲ್ಲಿ ಹೊತ್ತು ಸಾಗಲಿದ್ದಾರೆ. ಇದರೊಂದಿಗೆ ಸಂಜೆ 7 ಗಂಟೆಗೆ ಉಯ್ಯಾಲೋತ್ಸವ ನೆರವೇರಲಿದೆ.

You cannot copy content of this page