ಅಪಘಾತ ಸಮಗ್ರ ಸುದ್ದಿ

ಹೈವೇಯಲ್ಲಿ ಉರುಳಿಬಿದ್ದ ಬೃಹತ್ ಕoಟೈನರ್ ಲಾರಿ!

Share It

ಕಾರಿನ ಮೇಲೆ ಉರುಳಿ ಬೀಳೋದು ಜಸ್ಟ್ ಮಿಸ್..!

ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ.

ಓವರ್ ಟೇಕ್ ಮಾಡುವ ಭರದಲ್ಲಿ ಲಾರಿ ಚಾಲಕನ ನಿಯಂತ್ರಣ ತಪ್ಪಿದ ಬೃಹತ್ ಕಂಟೈನರ್ ಲಾರಿ ಹೈವೇಯಲ್ಲಿ ಉರುಳಿ ಬಿದ್ದ ಭಯಾನಕ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಮುದುಗೆರೆ ಸಮೀಪ ನಡೆದಿದೆ. ಅಪಘಾತದ ಭೀಕರ ದೃಶ್ಯ ಸ್ಥಳೀಯ ಹೋಟೆಲ್ ವೊಂದರ ಸಿಸಿಟಿವಿಯಲ್ಲಿ ಸರಿಯಾಗಿದೆ. ಹೈವೇಯಲ್ಲಿ ಮುಂದೆ ಸಾಗುತ್ತಿದ್ದ ಟಿಪ್ಪರ್ ಲಾರಿಯಿಂದ ಮುಂದೆ ಸಾಗುವ ಭರದಲ್ಲಿ ಪಕ್ಕದಲ್ಲಿ ಇದ್ದ ಬೈಕ್ ಗಳನ್ನ ಸೈಡ್ ಹೊಡೆಯಲು ಹೋಗಿ ಲಾರಿ ಉರುಳಿಬಿದ್ದಿದೆ. ಅದೃಷ್ಟವಶಾತ್ ರಸ್ತೆ ಬದಿ ನಿಂತಿದ್ದ ಕಾರಿನ ಮೇಲೆ ಲಾರಿ ಬೀಳೋದು ಜಸ್ಟ್ ಮಿಸ್ ಆಗಿ ಕಾರಿಗೆ ಟಚ್ ಆಗಿದೆ… ಇದ್ರಿಂದ ಕಾರಿನಲ್ಲಿದ್ದವರು ಬದುಕಿದೆವು ಅಂತ ಭಯದಿಂದಲೇ ಕಾರಿನಿಂದ ಇಳಿದಿದ್ದಾರೆ. ಇನ್ನೂ ಲಾರಿ ಯಲ್ಲಿದ್ದ ಚಾಲಕ ಬಿಹಾರ ಮೂಲದ ಧರ್ಮೇoದ್ರ ಹಾಗೂ ಕ್ಲಿನರ್ ಲಾಲ್ ಚಂದ್ ಗಾಯಗೊಂಡಿದ್ದಾರೆ. ಇಬ್ಬರನ್ನು ದೇವನಹಳ್ಳಿ ಸರಕಾರಿ ಆಸ್ಪತ್ರೆಗೆ ದಾಖಲಿ ಸಲಾಗಿದೆ. ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ… ಅಂದಹಾಗೆ ಲಾರಿಯಲ್ಲಿ ಪ್ಲಾಸ್ಟಿಕ್ ಪೈಪ್ಗಳನ್ನ ತುಂಬಿದ್ದು ಮಧ್ಯಪ್ರದೇಶದ ಭೋಪಾಲ್ ನಿಂದ ಹೊಸಕೋಟೆಗೆ ತರಲಾಗುತ್ತಿತ್ತು ಅಂತ ತಿಳಿದುಬಂದಿದೆ…

You cannot copy content of this page