ಕಾಂಬೋಡಿಯಾ ದಲ್ಲಿ ನಡೆದ ಅಂತರಾಷ್ಟ್ರೀಯ ಥ್ರೋಬಾಲ್ ಪಂದ್ಯದಲ್ಲಿ ಭಾಗವಹಿಸಿ ಭರ್ಜರಿ ಜಯಗಳಿಸಿದ ಭಾರತದ ಕ್ರೀಡಾಪಟುಗಳಿಗೆ ದೇವನಹಳ್ಳಿ ಏರ್ ಪೋರ್ಟಿನಲ್ಲಿ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.
ಫೈನಲ್ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ ಭಾರತ ತಂಡ ಭರ್ಜರಿ ಪೈಪೋಟಿ ನೀಡಿ ಗೆದ್ದು ಬೀಗಿದೆ. ಕಪ್ ಗೆದ್ದು ತವರಿಗೆ ಬಂದಂತಹ ಎಂಡೇವರ್ಸ್ ಇಂಟರ್ನ್ಯಾಷನಲ್ ಸ್ಕೂಲ್ ವಿದ್ಯಾರ್ಥಿಗಳಾದ ಅಕ್ಷಯ್ ಮತ್ತು ಚಂದನ್ ರೆಡ್ಡಿ ಸೇರಿ ಇಡೀ ತಂಡವನ್ನ ಪೋಷಕರು, ಶಾಲಾ ಆಡಳಿತ ಮಂಡಳಿ ಹಾಗೂ ಇತರೆ ಗಣ್ಯರು ಅತ್ಮೀಯವಾಗಿ ಬರಮಾಡಿಕೊಂಡರು.
ಜಯಶಾಲಿಗಳಾಗಿ ಬಂದಂತಹ ಕ್ರೀಡಾಪಟುಗಳಿಗೆ ಶಾಲಾ ಚೇರ್ಮನ್ ಎಂ.ಎಲ್.ಶಿವಶಂಕರ್, ಪೋಷಕರು, ಅಭಿಮಾನಿಗಳು ಅಭಿನಂದಿಸಿ ಗೌರವಿಸಿದ್ದಾರೆ.
ನಂತರ ಮಾತನಾಡಿದ ಶಿವಶಂಕರ್ ದೇಶಕ್ಕೆ ಗೌರವ ತಂದುಕೊಟ್ಟ ಕ್ರೀಡಾಪಟುಗಳಿಗೆ ಮೊದಲು ನಾನು ಅಭಿನಂದಿಸುತ್ತೇನೆ, ಅದರಲ್ಲೂ ನಮ್ಮ ಶಾಲಾ ಮಕ್ಕಳು ಹಾಗೂ ಮಹಿಳಾ ತಂಡದ ಕೋಚ್ ಭಾಗವಹಿಸಿ ಟ್ರೋಫಿ ಗೆದ್ದಿರುವುದು ಬಹಳ ಖುಷಿ ತಂದುಕೊಟ್ಟಿದೆ, ಇದು ನಮ್ಮ ದೇಶಕ್ಕೆ, ನಮ್ಮ ರಾಜ್ಯಕ್ಕೆ ಗೌರವ ಸಿಕ್ಕಂತಾಗಿದೆ, ನಮ್ಮ ಶಾಲೆಯ ಕ್ರೀಡಾಪಟುಗಳಿಗೆ ಎಲ್ಲಾ ರೀತಿಯ ಸಹಕಾರ ನೀಡಲು ನಾವು ಪ್ರೋತ್ಸಾಹಿಸುತ್ತೇವೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.