ಸಮಗ್ರ ಸುದ್ದಿ

ಜಿಲ್ಲಾಡಳಿತ ಭವನದಲ್ಲಿ ಶ್ರೀ ಸಂತ ಸೇವಾಲಾಲ್ ಅವರ ಜಯಂತಿ ಆಚರಣೆ

Share It

ಸಂತ ಸೇವಾಲಾಲ್ ಒಬ್ಬ ಪವಾಡ ಪುರುಷ. ಬಂಜಾರ ಸಮುದಾಯದ ಸಾಧಕರು. ಸಂತ ಸೇವಾಲಾಲ್ ಮಹಾರಾಜರು ಪ್ರತಿ ಬಂಜಾರ ಕುಟುಂಬಂದ ಪೂಜ್ಯಾ ಸಂಕೇತ ಎಂದು ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ ಅವರು ಶ್ರೀ ಸಂತ ಸೇವಾಲಾಲ್ ಅವರನ್ನ ಸ್ಮರಿಸಿದರು.

ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಶ್ರೀ ಸಂತ ಸೇವಾಲಾಲ್ ಜಯಂತಿ ದಿನಾಚರಣೆಯನ್ನು ಉದ್ಘಾಟಿಸಿ, ಶ್ರೀ ಸಂತ ಸೇವಾಲಾಲ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಿಲ್ಲಿಸಿ ಮಾತನಾಡಿ.

ಸಂತ ಸೇವಾಲಾಲ್ ಅವರು ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಭಾಯಗಡ್- ಸೊರಗೊಂಡನಕೊಪ್ಪದಲ್ಲಿ ಜನಿಸಿದರು. ಸಂತ ಸೇವಾಲಾಲ್ ಅವರು ಒಬ್ಬ ಪವಾಡ ಪುರುಷ. ಬಂಜಾರ ಸಮುದಾಯದ ಸಾಧಕರು ಎಂದು ಅವರ ಕಾರ್ಯಗಳನ್ನ ಸ್ಮರಿಸಿದರು. ಇನ್ನು ಸಂತ ಸೇವಾಲಾಲ್ ಮಹಾರಾಜರು ಪ್ರತಿ ಬಂಜಾರ ಕುಟುಂಬದ ಪೂಜ್ಯಾ ಸಂಕೇತ ವಾಗಿದ್ದಾರೆ. ಫೆಬ್ರವರಿ 15 ರಂದು ಅತ್ಯಂತ ವಿಜೃಂಭಣೆಯಿಂದೆ ಎಲ್ಲಾ ರಾಜ್ಯಗಳಲ್ಲೂ ಸಂತ ಸೇವಾಲಾಲ್ ಅವರ ಜಯಂತಿಯನ್ನು ಆಚರಿಸುತ್ತಾರೆ. ಸಂತ ಸೇವಾಲಾಲ್ ಅವರ ಸಮಾಧಿ ಸ್ಥಳ ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯ ಪೊಹ್ರಾದೇವಿಯಲ್ಲಿದ್ದು, ಇದನ್ನು “ಬಂಜಾರ ಕಾಶಿ” ಎಂದು ಕರೆಯಲಾಗುತ್ತದೆ ಎಂದು ಹೇಳಿದರು.

ಸಮಾಜದಲ್ಲಿನ ಅಸಮಾನತೆ, ಅನಿಷ್ಟ ಪದ್ಧತಿ, ಅನಾಚಾರ, ದೌರ್ಜನ್ಯಗಳನ್ನು ಹೋಗಲಾಡಿಸಲು ವಿವಿಧೆಡೆ ಸುತ್ತಾಡಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದರು ಎಂದು ಹೇಳಿದರು.

ಇದೇ ವೇಳೆ ಬಂಜಾರ ಸಮುದಾಯದ ಮುಖಂಡರು ಮನವಿಗೆ ಸ್ಪಂದಿಸಿ ಪರಿಹರಿಸಲು ಕ್ರಮ ವಹಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಯುವಸಬಲೀಕರನ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಗೀತಾ, ಶ್ರೀಕಂಠ ಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಿಬ್ಬಂದಿ, ಬಂಜಾರ ಸಮುದಾಯದ ಮುಖಂಡರು ಸಿಬ್ಬಂದಿ ಉಪಸ್ಥಿತರಿದ್ದರು.

You cannot copy content of this page