ಅಪಘಾತ ಸಮಗ್ರ ಸುದ್ದಿ

ಸ್ಲೀಪರ್ ಕೋಚ್ ಬಸ್ ನ ಮತ್ತೊಂದು ದುರಂತ! ಕ್ಷಣಾರ್ಧದಲ್ಲಿ ತಪ್ಪಿದ ಭಾರಿ ಅನಾಹುತ!

Share It

ಹೌದು, ಇತ್ತೀಚೆಗೆ ರಾಜ್ಯದ ಸ್ಲೀಪರ್ ಕೋಚ್ ಬಸ್ ಗಳು ದುರಂತಕ್ಕೀಡಾಗುತ್ತಿದ್ದು, ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಸಾವನ್ನಪ್ಪುತ್ತಿದ್ದಾರೆ. ಅದೇ ರೀತಿ ದೇವನಹಳ್ಳಿ ಬಳಿ ಸಹ ಸ್ಲೀಪರ್ ಕೋಚ್ ಬಸ್ ಅಪಘಾತಕ್ಕೀಡಾಗಿದ್ದು, ಟೋಲ್ ಪ್ಲಾಜಾ ಬೂತ್ ಗೆ ಬಸ್ ಡಿಕ್ಕಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಣಾಪಾಯ ಸಂಭವಿಸಿಲ್ಲ.

ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಘಟನೆ ನಡೆದಿದ್ದು, ಅತಿ ವೇಗದಿಂದ ದೇವನಹಳ್ಳಿ ಯಿಂದ ಬೆಂಗಳೂರು ಕಡೆ ಹೋಗುತ್ತಿದ್ದ ಬಸ್ ದೇವನಹಳ್ಳಿ ಬಳಿಯ ಟೋಲ್ ಪ್ಲಾಜಾ ಬೂತ್ ಗೆ ಡಿಕ್ಕಿ ಹೊಡೆದಿದ್ದು, ಬಸ್‌ನಲ್ಲಿದ್ದ 40 ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಆದರೆ ಚಾಲಕ ಹಾಗೂ ಸಹಚಾಲಕ ಮತ್ತು ಕ್ಲೀನರ್ ಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ರವಾನಿಸಲಾಗಿದೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆಸಿದ್ದಾರೆ.

You cannot copy content of this page