ಅಪರಾಧ ಸಮಗ್ರ ಸುದ್ದಿ

ಖಾಸಗೀ ಆಸ್ಪತ್ರೆಯಲ್ಲೊಬ್ಬ ವಿಕೃತಕಾಮಿ: ನರ್ಸಗಳ ಬಟ್ಟೆ ಬದಲಿಸೋ ವಿಡಿಯೋ ಚಿತ್ರಿಸುತ್ತಿದ್ದ ಈ ಕ್ರಿಮಿ!

Share It

ಹೌದು, ಖಾಸಗೀ ಆಸ್ಪತ್ರೆಯೊಂದರಲ್ಲಿ ವೃತ್ತಿ ಮಾಡಿಕೊಂಡಿದ್ದ ವ್ಯಕ್ತಯೋರ್ವ ತನ್ನ ಸಹೋದ್ಯೋಗಿಗಳು ಹಾಗೂ ನರ್ಸ್ ಗಳು ಬಟ್ಟೆ ಬದಲಿಸುವುದನ್ನು ಚಿತ್ರೀಕರಣ ಮಾಡುತ್ತಿದ್ದ ಪ್ರಕರಣ ಬಯಲಿಗೆ ಬಂದಿದೆ. ಆಪರೇಷನ್ ಥಿಯೇಟರ್ ನಲ್ಲಿ ಕೆಲಸ ಮಾಡುತ್ತಿದ್ದ ಇವನು ಇಂತಹ ಕೃತ್ಯ ಮಾಡುತ್ತಿದ್ದನು.

ಕಳೆದು ಒಂದು ವರ್ಷದಿಂದ ಇವನು ಇದೇ ಚಾಳಿ ಮುಂದುವರೆಸಿಕೊಂಡು ಬಂದಿದ್ದು, ಇತ್ತೀಚೆಗೆ ಇವನು ರೆಕಾರ್ಡ್ ಮಾಡುತ್ತಿದ್ದ ಸಂದರ್ಭದಲ್ಲಿ ನರ್ಸ್ ಗಮನಿಸಿ ಡಾಕ್ಟರ್ ಗೆ ತಿಳಿಸಿದ್ದಾರೆ. ಡಾಕ್ಟರ್ ಕೂಡಲೇ ಅನ್ನಪೂರ್ಣೇಶ್ವರಿ ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನನ್ವಯ ಪೊಲೀಸರು ಎಫ್ ಐಆರ್ ದಾಖಲು ಮಾಡಿದ್ದು, ಆರೋಪಿ ಸುವೆಂದು ಮೊಹಂತ ಎಂಬಾತನನ್ನು ಬಂಧಿಸಿದ್ದಾರೆ.

ನಾಗರಬಾವಿಯ ಖಾಸಗೀ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಆರೋಪಿಯ ಮೊಬೈಲ್ ನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

You cannot copy content of this page