
ಬೃಹತ್ ಬೆಂಗಳೂರು ಪ್ರಾಧಿಕಾರದ ಚುನಾವಣೆ ಸನಿಹವಾಗುತ್ತಿದ್ದು, ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳು ಮುನ್ನೆಲೆಗೆ ಬರುತ್ತಿದ್ದಾರೆ. ತಮಗೆ ಟಿಕೇಟ್ ನೀಡುವಂತೆ ತಮ್ಮ ತಮ್ಮ ಪಕ್ಷಗಳಲ್ಲಿ ಲಾಭಿ ನಡೆಸುತ್ತಿದ್ದು, ಟಿಕೇಟ್ ನೀಡುವಂತೆ ಅರ್ಜಿ ಸಲ್ಲಿಕೆಗೂ ಸಹ ಮುಂದಾಗಿದ್ದಾರೆ. ಇತ್ತ ಕಾಂಗ್ರೆಸ್ ಪಕ್ಷದಲ್ಲಿ ಯಾರು ಆಕಾಂಕ್ಷಿಗಳಿದ್ದಾರೊ ಅಂತಹವರು ಜ.15 ರೊಳಗೆ ಅರ್ಜಿ ಸಲ್ಲಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಚ ಡಿಕೆಶಿ ಹೇಳಿದ್ದು, ಆಕಾಂಕ್ಷಿಗಳು ಅರ್ಜಿ ಪಡೆದು ಸಲ್ಲಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಅಂತೆಯೇ ಬೆಂಗಳೂರು ಪೂರ್ವ ಪಾಲಿಕೆ ವ್ಯಾಪ್ತಿಯ ಹೊಯ್ಸಳ ನಗರ ಪೂರ್ವ ವಾರ್ಡ್ ಸಂಖ್ಯೆ 5 ಕ್ಕೆ ಕಾಂಗ್ರೆಸ್ ಪಕ್ಷದಿಂದ ಆಕಾಂಕ್ಷಿಯಾಗಿ ಪ್ರಚಾರ ಸಮಿತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಸುಬ್ಬು ಅರ್ಜಿ ಪಡೆದಿದ್ದಾರೆ.
ಪಕ್ಷ ಸಂಘಟನೆಗಾಗಿ ವಾರ್ಡ್ ನಲ್ಲಿ ಶ್ರಮಿಸುತ್ತಿದ್ದು, ನಾನು ಕೂಡ ಈ ಬಾರಿಯ ಜಿಬಿಎ ಚುನಾವಣೆಯಲ್ಲಿ ಪ್ರಬಲ ಆಕಾಂಕ್ಷಿಯಾಗಿದ್ದೇನೆ. ಕಾಂಗ್ರೆಸ್ ಪಕ್ಷದ ಓರ್ವ ಶಿಸ್ತಿನಿ ಸಿಪಾಯಿಯಾಗಿ ಅರ್ಜಿ ಪಡೆದಿದ್ದೇನೆ. ಕಾಂಗ್ರೆಸ್ ಹೈಕಮಾಂಡ್ ಯಾವುದೇ ತೀರ್ಮಾನ ತೆಗೆದುಕೊಂಡರು ಸಹ ನಾನು ಬದ್ಧನಾಗಿರುತ್ತೇನೆ ಎಂದು ಶ್ರೀನಿವಾಸ್ ಸುಬ್ಬು ಹೇಳಿದರು.