ಅಪರಾಧ ಸಮಗ್ರ ಸುದ್ದಿ

ಪತ್ನಿಯ ಹಣೆಗೆ ಗುಂಡು ಹಾರಿಸಿ ಹತ್ಯೆಗೈದ ಪತಿರಾಯ!

Share It

ಹೌದು, ಇತ್ತೀಚಿನ ದಿನಗಳಲ್ಲಿ ಸಾಂಸಾರಿಕ ಜೀವನದಲ್ಲಿ ಸಾಕಷ್ಟು ತೊಡಕುಗಳನ್ನು ಅನುಭವಿಸುತ್ತಿರುವ ನವಯುಗದ ದಂಪತಿಗಳು ಅಂತಹ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಮುಂದೆ ಸಾಗುವ ಬದಲಾಗಿ ಅಂತಹ ಸಮಸ್ಯೆಗಳು ಮತ್ತಷ್ಟು ವಿಕೋಪಕ್ಕೆ ತಿರುಗುವಂತೆ ನಡೆದುಕೊಳ್ಳುತ್ತಿದ್ದಾರೆ. ಇಂತಹ ವಿಕೋಪಗಳು ಅನಾವುತಕ್ಕೆ ದಾರಿ ಮಾಡಿಕೊಟ್ಟಿದ್ದು ಹತ್ಯೆಗೈಯುವವರೆಗೆ ಮುಟ್ಟುತ್ತಿವೆ. ಈ ಒಂದು ಪ್ರಕರಣದಲ್ಲೂ ಸಹ ಗಂಡ ಹೆಂಡತಿ ನಡುವಿನ ಜಗಳ ವಿಕೋಪಕ್ಕೆ ತಿರುಗಿ ಹೆಂಡತಿಯನ್ನು ಗಂಡ ಗನ್ ನಿಂದ ಶೂಟ್ ಮಾಡಿ ಸಾಯಿಸಿದ್ದಾನೆ.

ಬಸವೇಶ್ವರ ನಗರದ ವೆಸ್ಟ್ ಇನ್ ಹೋಟೆಲ್ ಬಳಿ ಘಟನೆ ನಡೆದಿದ್ದು, ಬಾಲಮುರುಗನ್ ತನ್ನ ಹೆಂಡತಿ ಭುವನೇಶ್ವರಿ ಗೆ ಗನ್ ನಿಂದ ಶೂಟ್ ಮಾಡಿ ಹತ್ಯೆ ಮಾಡಿದ್ದಾನೆ. ಅಂದಹಾಗೆ ಬಾಲಮುರುಗನ್ ಮತ್ತು ಭುವನೇಶ್ವರಿ ನ್ಯಾಯಾಲಯದಲ್ಲಿ ಡೈವರ್ಸ್ ಗೆ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದು, ನೆನ್ನೆ ಕೇಸ್ ಮುಗಿಸಿಕೊಂಡು ಮನೆಗೆ ಹಿಂತಿರುಗಿದ್ದಾರೆ. ಈ ವೇಳೆ ಇಬ್ಬರ ನಡುವೆ ಜಗಳ ಜೋರಾಗಿ ನಡೆದಿದೆ. ಈ ಜಗಳ ವಿಕೋಪಕ್ಕೆ ತಿರುಗಿ ಬಾಲಮುರುಗನ್ ಗನ್ ನಿಂದ ಹೆಂಡಿಯ ಹಣೆಗೆ ಶೂಟ್ ಮಾಡಿದ್ದಾನೆ. ಮೂರು ಸುತ್ತು ಗನ್ ನಿಂದ ಶೂಟ್ ಮಾಡಿದ್ದು, ಭುವನೇಶ್ವರಿ ತೀವ್ರವಾಗಿ ಗಾಯಗೊಂಡಿದ್ದಾಳೆ. ಆದರೆ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾಳೆ.

ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಮೊದಲೇ ಪ್ಲಾನ್ ಮಾಡಿಕೊಂಡು ಕೊಲೆ ಮಾಡುವ ಉದ್ದೇಶದಿಂದಲೇ ಗನ್ ತಂದಿದ್ದ ಎನ್ನಲಾಗಿದೆ. ಇನ್ನು ಸ್ಥಳಕ್ಕೆ ಸೋಕೋ ಟೀಂ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಬಾಲಮುರುಗನ್ ಅರೆಸ್ಟ್ ಮಾಡಿರುವ ಪೊಲೀಸರು ತೀವ್ರ ವಿಚಾರಣೆ ಮಾಡುತ್ತಿದ್ದಾರೆ.

You cannot copy content of this page