ಹೌದು, ನೆನ್ನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಅಣ್ಣೇಶ್ವರ ಗ್ರಾಪಂ ನೂತನ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಇಂತಹದ್ದೊಂದು ಸನ್ನಿವೇಶ ನಡೆದಿದೆ. ಕಚೇರಿ ಉದ್ಘಾಟನೆ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಕೆ.ಹೆಚ್.ಮುನಿಯಪ್ಪ ಹಠಾತ್ ಮಾಧ್ಯಮ ಪ್ರತಿನಿಧಿಗಳ ಮೇಲೆ ಗರಂ ಆದ ಘಟನೆ ನಡೆಯಿತು.
ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಕೆ.ಹೆಚ್.ಮುನಿಯಪ್ಪನವರು 7 ಬಾರಿ ಸಂಸದರಾಗಿದ್ದರು ಅಭಿವೃದ್ಧಿ ಶೂನ್ಯವಾಗಿತ್ತು. ನಾವು ಅಧಿಕಾರಕ್ಕೆ ಬಂದ ನಂತರ ಕೋಲಾರ ಅಭಿವೃದ್ಧಿ ಹೊಂದುತ್ತಿದೆ ಎಂದಿದ್ದರು. ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಸಚಿವ ಕೆ.ಹೆಚ್.ಮುನಿಯಪ್ಪ ರನ್ನು ಪ್ರಶ್ನಿಸಿದ್ದರು. ಈ ವೇಳೆ ಹಠಾತ್ ಕೋಪಗೊಂಡ ಸಚಿವ ಕೋಲಾರದ ಬಗ್ಗೆ ನಿನಗೇನು ಕೆಲಸ, ನಿನಗೆ ಬೇರೆ ಕೆಲಸ ಇಲ್ವಾ? ಎಂದು ಮಾಧ್ಯಮ ಪ್ರತಿನಿಧಿಗೆ ಉತ್ತರಿಸಿದರು. ಕೇವಲ ರಾಜ್ಯಕ್ಕೆ ಸಂಬಂಧಿಸಿದ್ದ ಕೇಳಿ ಎಂದಿದ್ದರು.
ನಂತರ ಸ್ವಲ್ಪ ಸಮಾಧಾನಗೊಂಡು ನಾನು ಮಾಡಿರುವ ಅಭಿವೃದ್ಧಿ ಕುರಿತಾಗಿ ರೈಲ್ವೆ ಇಲಾಖೆ, ಅಲ್ಲಿನ ಜನರು ಮತ್ತು ಅಲ್ಲಿನ ರೈತರನ್ನು ಕೇಳಿ ಸುದ್ದಿ ಬರೆಯಿರಿ ಎಂದು ಹೇಳಿರುವ ಘಟನೆ ನಡೆದಿದೆ.