ರಾಷ್ಟ್ರೀಯ ಸುದ್ದಿ ಸಮಗ್ರ ಸುದ್ದಿ

ಯೋಗಿ ಆದಿತ್ಯನಾಥ್ ದೇಶದ ನಂಬರ್ 1 ಜನಪ್ರಿಯ ಸಿಎಂ! ಸಿಎಂ ಸಿದ್ಧರಾಮಯ್ಯಗೆ ಯಾವ ಸ್ಥಾನ ಗೊತ್ತಾ?

Share It

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ದೇಶದ ನಂ.1 ಜನಪ್ರಿಯ ಸಿಎಂ ಎಂದು ಇಂಡಿಯಾ ಟುಡೇ ಮೂಡ್‌ ಆಫ್‌ ದಿ ನೇಷನ್‌ ಸಮೀಕ್ಷೆ ಹೇಳಿದೆ. ಈ ಸಮೀಕ್ಷೆಯಲ್ಲಿ ಯೋಗಿ ಬಳಿಕ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಸ್ಥಾನ ಪಡೆದಿದ್ದಾರೆ.

ಇಂಡಿಯಾ ಟುಡೇ ಸಿವೋಟರ್‌ ನಡೆಸಿದ ಸಮೀಕ್ಷೆಯಲ್ಲಿ ಯೋಗಿ ಆದಿತ್ಯನಾಥ್ ಅವರಿಗೆ ಶೇ.36 ರಷ್ಟು ಜನರು ಮೆಚ್ಚುಗೆ ಸೂಚಿಸಿ ಅನುಮೊದನೆ ನೀಡಿದ್ದಾರೆ. ಅನಂತರ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರಿಗೆ ಶೇ.12.5, ಕಳೆದ ವರ್ಷ ಸಿಎಂ ಗಾದಿ ಅಲಂಕರಿಸಿದ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ಶೇ.7.3ರಷ್ಟು ಮಂದಿ ಮೆಚ್ಚಿದ್ದಾರೆ.

ಉಳಿದಂತೆ ಬಿಹಾರದ ನಿತೀಶ್‌ ಕುಮಾರ್‌( ಶೇ.4.3). ತಮಿಳುನಾಡು ಸಿಎಂ ಸ್ಟಾಲಿನ್( ಶೇ.3.8) ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯ್‌( ಶೇ.3), ತೆಲಂಗಾಣ ಸಿಎಂ ರೇವಂತ್ ರೆಡ್ಡಿ(ಶೇ.2.8), ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್‌ ( ಶೇ.2.7) ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ( ಶೇ.2.1), ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್‌( ಶೇ.1.7) ಅಗ್ರ 10ರಲ್ಲಿ ಸ್ಥಾನ ಪಡೆದಿದ್ದಾರೆ. ಜನಪ್ರಿಯತೆ ಹಾಗೂ ಆಡಳಿತ ಅಂಶಗಳನ್ನು ಮಾನದಂಡವನ್ನಾಗಿಟ್ಟುಕೊಂಡು ಸಮೀಕ್ಷೆ ನಡೆಸಲಾಗಿತ್ತು. ಆದರೆ ಈ ಸಮೀಕ್ಷೆಯಲ್ಲಿ ಕರ್ನಾಟಕ ಸಿಎಂ ಸಿದ್ದರಾಮಯ್ಯಗೆ ಟಾಪ್ 10 ನಲ್ಲಿ ಸ್ಥಾನ ದೊರೆತಿಲ್ಲ.

You cannot copy content of this page