ಕಾನೂನು ಸಮಗ್ರ ಸುದ್ದಿ

ಕರ್ನಾಟಕ ಹೈಕೋರ್ಟ್​ಗೆ ಮೂವರು ನೂತನ ನ್ಯಾಯಮೂರ್ತಿಗಳ ನೇಮಕ

Share It

ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು!

ಮೂವರು ನ್ಯಾಯಾಂಗ ಅಧಿಕಾರಿಗಳನ್ನು ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಗಳನ್ನಾಗಿ ನೇಮಿಸುವ ಪ್ರಸ್ತಾವನೆಗೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಸೋಮವಾರ ಅನುಮೋದನೆ ನೀಡಿದೆ.

ಸುಪ್ರೀಂ ಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ನೇತೃತ್ವದ ಐವರು ನ್ಯಾಯಮೂರ್ತಿಗಳ ಕೊಲಿಜಿಯಂ ಸೋಮವಾರ ಸಭೆ ಸೇರಿ ಈ ಶಿಫಾರಸು ಮಾಡಿದೆ. ನ್ಯಾಯಾಂಗ ಅಧಿಕಾರಿಗಳಾದ ಗೀತಾ ಭರತರಾಜ ಶೆಟ್ಟಿ ಕಡಬ, ಮುರಳೀಧರ ಪೈ ಬೊರ್ಕಟ್ಟೆ ಹಾಗೂ ತ್ಯಾಗರಾಜ ನಾರಾಯಣ ಇನವಳ್ಳಿ ಅವರ ಹೆಸರನ್ನು ಶಿಫಾರಸು ಮಾಡಲಾಗಿದೆ.

ಇನ್ನು ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿ ಕುರುಬರಹಳ್ಳಿ ವೆಂಕಟರಾಮರೆಡ್ಡಿ ಅರವಿಂದ್ ಅವರನ್ನು ಕಾಯಂ ನ್ಯಾಯಮೂರ್ತಿಯನ್ನಾಗಿ ನೇಮಿಸುವ ಪ್ರಸ್ತಾವಕ್ಕೂ ಕೊಲಿಜಿಯಂ ಅನುಮೋದನೆ ಕೊಟ್ಟಿದೆ.

You cannot copy content of this page