ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸರು ಇಂದು ಬೆಳ್ಳಂಬೆಳಿಗ್ಗೆ ಮೆಗಾ ಕಾರ್ಯಾಚರಣೆ ನಡೆಸಿದ್ದಾರೆ. ಕಾರ್ಯಾಚರಣೆಯಲ್ಲಿ ಬರೋಬ್ಬರಿ 25 ಬೈಕ್ ಗಳನ್ನು ಸೀಜ್ ಮಾಡಿದ್ದು, 15 ಪುಂಡರನ್ನು ಬಂಧಿಸಿದ್ದಾರೆ.

ವೀಕೆಂಡ್ ಬಂತೆಂದಂರೆ ಸಾಕು ರ್ರುಮ್ ರ್ರುಮ್ ಅಂತ ಸದ್ದು ಮಾಡುತ್ತ ಇತರೆ ವಾಹನ ಸವಾರರಿಗೆ ತೊಂದರೆ ನೀಡುತ್ತಾ ನಂದಿಬೆಟ್ಟದ ರಸ್ತೆಯಲ್ಲಿ ವೀಲ್ಹಿಂಗ್ ಮಾಡಿಕೊಂಡು ಬರುತ್ತಿದ್ದ ಪುಂಡರಿಗೆ ಇಂದು ಏರ್ಪೋರ್ಟ್ ಸಂಚಾರಿ ಪೊಲೀಸರ್ ಶಾಕ್ ನೀಡಿದ್ದಾರೆ. ಈ ಪುಂಡರ ಎಡೆಮುರಿ ಕಟ್ಟಿದ್ದು, ದೇವನಹಳ್ಳಿ ಯ ರಾಣಿಕ್ರಾಸ್ ಸರ್ಕಲ್ ನಲ್ಲಿ ವೀಲ್ಹಿಂಗ್ ಮಾಡುತ್ತಿದ್ದ 15 ಮಂದಿ ಪುಂಡರನ್ನು ಬಂಧಿಸಿದ್ದಾರೆ.

ಏರ್ಪೋರ್ಟ್ ಸಂಚಾರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರಾಘವೇಂದ್ರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು, ಡಿಯೋ, ಆರ್ ಎಕ್ಸ್ , ಹೋಂಡಾ ಆಕ್ಟಿವಾ ಸೇರಿದಂತೆ ಬರೋಬ್ಬರಿ 25 ದ್ವಿಚಕ್ರ ವಾಹನಗಳನ್ನು ಸೀಜ್ ಮಾಡಿದ್ದಾರೆ.