ಕಾನೂನು ಸಮಗ್ರ ಸುದ್ದಿ

ಸುಪ್ರೀಂ ಕೋರ್ಟ್ ನಿಂದ ದರ್ಶನ್ ಬೇಲ್ ಆದೇಶ ಪ್ರಕಟ! ಜೈಲಾ? ಬೇಲಾ?

Share It

ಹೌದು, ಹೈಕೋರ್ಟ್ ನಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬೇಲ್ ಪಡೆದಿದ್ದ ದರ್ಶನ್ ಸೇರಿದಂತೆ 7 ಮಂದಿಯ ವಿರುದ್ದ ರಾಜ್ಯ ಸರಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಈ ಸಂಬಂಧ ವಾದ ಆಲಿಸಿದ್ದ ಸುಪ್ರೀಂ ಇಂದು ಆದೇಶ ನೀಡುವುದಾಗಿ ನಿಗದಿ ಮಾಡಿತ್ತು.

ಇದೀಗ ಸುಪ್ರೀಂ ಕೋರ್ಟ್ ದರ್ಶನ್ ಬೇಲ್ ಭವಿಷ್ಯದ ಆದೇಶ ಹೊರಬಿದ್ದಿದ್ದು, ದರ್ಶನ್ ಸೇರಿದಂತೆ 7 ಮಂದಿಯ ಬೇಲ್ ಅನ್ನು ರದ್ದು ಮಾಡಿ ಆದೇಶ ಹೊರಡಿಸಿದೆ. ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ ಹಾಗೂ ಆರ್.ಮಹದೇವನ್ ಇದ್ದ ದ್ವಿಸದಸ್ಯ ಪೀಠ ಈ ಆದೇಶವನ್ನು ಹೊರಡಿಸಿದೆ.

ಬೇಲ್ ರದ್ದುಗೊಳಿಸಿದ ಸುಪ್ರೀಂ ಇಂದೇ 7 ಮಂದಿ ಸೆರೆಂಡರ್ ಆಗುವಂತೆ ಸೂಚಿಸಿದೆ. ಇಲ್ಲವಾದರೆ ಅರೆಸ್ಟ್ ಮಾಡುವಂತೆ ಆದೇಶ ಹೊರಡಿಸಿದೆ. ಇದರಿಂದ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್ ಸೇರಿದಂತೆ ಏಳು ಮಂದಿಗೆ ಮತ್ತೆ ಜೈಲೂಟ ಫಿಕ್ಸ್ ಆಗಿದೆ.

You cannot copy content of this page