
ದೊಡ್ಡಬಳ್ಳಾಪುರ- ಹೊಸಕೋಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೊಮ್ಯಾಟೊ ತುಂಬಿದ್ದ ಬುಲೆರೋ ವಾಹನ ಕ್ಯಾಂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ದೇವನಹಳ್ಳಿ ಬಳಿಯ ಗೋಕರೆ ಬಳಿ ಇಂದು ಬೆಳಿಗ್ಗೆ ಅಪಘಾತ ಸಂಭವಿಸಿದ್ದು, ಕೆಂಪೇಗೌಡ ಏರ್ಪೋರ್ಟ್ ಸಂಚಾರಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.

ಗೋಕರೆ ಬಳಿ ಚಲಿಸುತ್ತಿದ್ದ ಕ್ಯಾಂಟರ್ ಹಿಂಬದಿಗೆ ಬುಲೆರೋ ವಾಹನ ಡಿಕ್ಕಿ ಹೊಡೆದಿದ್ದು, ಬುಲೆರೋ ವಾಹನದ ಡ್ರೈವರ್ ಪಕ್ಕದಲ್ಲಿದ್ದ ವ್ಯಕ್ತಿ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಡ್ರೈವರ್ ನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಟೊಮ್ಯಾಟೊ ತುಂಬಿದ್ದ ವಾಹನ ದೇವನಹಳ್ಳಿ ಕಡೆಯಿಂದ ಕೋಲಾರದ ಕಡೆ ತೆರಳುತ್ತಿತ್ತು ಎನ್ನಲಾಗಿದೆ. ಮೃತನ ವಿಳಾಸ ತಿಳಿದುಬಂದಿಲ್ಲ. KA06AC6678 ಬುಲೆರೋ ವಾಹನ ಸಂಖ್ಯೆಯಾಗಿದ್ದು, TN24AX1378 ತಮಿಳುನಾಡು ಮೂಲದ ಕ್ಯಾಂಟರ್ ವಾಹನದ ಸಂಖ್ಯೆಯಾಗಿದೆ.