
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕು ಬೂದಿಗೆರೆ ಗ್ರಾಮದ ಬಸ್ ನಿಲ್ದಾಣದ ತಿರುವಿನಲ್ಲಿ ಸ್ಕೂಟಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಯುವತಿಯ ಕಾಲು ಅಪ್ಪಚ್ಚಿಯಾಗಿರುವ ಘಟನೆ ನಡೆದಿದೆ. ದೇವನಹಳ್ಳಿ ತಾಲ್ಲೂಕು ಹಂದರಹಳ್ಳಿ ಗ್ರಾಮದ ನಿವಾಸಿ ಲತಾ(22) ಅಪಘಾತಕ್ಕೀಡಾಗಿರುವ ಯುವತಿಯಾಗಿದ್ದು, ಅಪಘಾತದ ನಂತರ ಸ್ಥಳದಿಂದ ಲಾರಿ ಚಾಲಕ ಕಾಲ್ಕಿತ್ತಿದ್ದಾನೆ.

ಗಾಯಾಳುವನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಸಾಗಿಸಿ ತದನಂತರ ಆ್ಯಂಬುಲೆನ್ಸ್ ಮುಖಾಂತರ ಬೇರೆ ಆಸ್ಪತ್ರೆಗೆ ರವಾನಿಸಲಾಯಿತು. ಬಸ್ ನಿಲ್ದಾಣದ ತಿರುವಿನಲ್ಲಿ ಅಪಘಾತ ನಡೆದ ಕಾರಣ ಬೂದಿಗೆರೆ ಯಿಂದ ದೇವನಹಳ್ಳಿ ಮಾರ್ಗವಾಗಿ ಹಾಗೂ ವಿಜಯಪುರದಿಂದ ದೇವನಹಳ್ಳಿ ಮಾರ್ಗಕ್ಕೆ ತಿರುವು ಪಡೆಯುವ ಬೃಹತ್ ವಾಹನಗಳು ಪರದಾಡುವ ಪರಿಸ್ಥಿತಿ ಉಂಟಾಗಿತ್ತು.
ಸ್ಥಳಕ್ಕಾಗಮಿಸಿದ ಚನ್ನರಾಯಪಟ್ಟಣ ಪೊಲೀಸರು ಪರಿಶೀಲನೆ ನಡೆಸಿದರು.