
ಹೌದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ ರೇಷ್ಮೆ ಇಲಾಖೆ ಪಕ್ಕದಲ್ಲಿನ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ನಲ್ಲಿ ಹೀಗೆ ಪೆಟ್ರೋಲ್ ಜೊತೆ ನೀರು ಬಂದಿದೆ ಎಂದು ಗ್ರಾಹಕ ಆರೋಪ ಮಾಡಿದ್ದು, ಪೆಟ್ರೋಲ್ ಬಂಕ್ ಸಿಬ್ಬಂದಿಯೊಂದಿಗೆ ವಾಗ್ವದಕ್ಕಿಳಿದಿದ್ದ ಘಟನೆ ನಡೆದಿದೆ.
ಅಂದಹಾಗೆ ನೆನ್ನೆ ಸಂಜೆ ವೇಳೆ ದೇವನಹಳ್ಳಿ ತಾಲ್ಲೂಕು ಅಕ್ಲೇಮಲ್ಲೇನಹಳ್ಳಿ ನಿವಾಸಿ ದೇವರಾಜು ತನ್ನ ಪಲ್ಸರ್ 150 ಬೈಕ್ಗೆ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ನಲ್ಲಿ 520 ರೂಪಾಯಿ ಪೆಟ್ರೋಲ್ ಹಾಕಿಸಿದ್ದಾನೆ.

ಆದರೆ ಸ್ವಲ್ಪ ದೂರ ಹೋಗುತ್ತಿದ್ದಂತೆ ಬೈಕ್ ನಿಂತು ಹೋಗಿದೆ. ಅನುಮಾನಗೊಂಡು ಗ್ಯಾರೇಜ್ ನಲ್ಲಿ ಪೆಟ್ರೋಲ್ ಹೊರತೆಗೆಸಿದಾಗ ಪೆಟ್ರೋಲ್ ಜೊತೆ ಸಾಕಷ್ಟು ಪ್ರಮಾಣದಲ್ಲಿ ನೀರು ಇರುವುದು ಕಂಡುಬಂದಿದೆ. ಇದರಿಂದ ಆಕ್ರೋಶಗೊಂಡ ಗ್ರಾಹಕ ನೀರು ಮಿಶ್ರಿತ ಪೆಟ್ರೋಲ್ ನ್ನು ಬಾಟೆಲ್ ನಲ್ಲಿ ಹಿಡಿದುಕೊಂಡ ಬಂಕ್ ಬಳಿ ಬಂದು ಗಲಾಟೆ ಮಾಡಿದ್ದಾನೆ. ಈ ವೇಳೆ ಬಂಕ್ ನವರು ನೀನು ಏನಾದ್ರು ಮಾಡಿಕೋ ಬೇಕಾದ್ರೆ ಕಂಪ್ಲೆಂಟ್ ಕೊಡು ಎಂದರು ಎಂದು ಗ್ರಾಹಕ ಆರೋಪಿಸಿದ್ದಾನೆ.

ಇನ್ನು ಈ ಬಂಕ್ ನಲ್ಲಿ ಇದೇ ರೀತಿ ಈ ಹಿಂದೆ ಸಹ ಘಟನೆ ನಡೆದಿತ್ತು ಎಂದು ಗ್ರಾಹಕ ಆರೋಪಿಸಿದ್ದಾನೆ.