ಅಪರಾಧ ಕಾನೂನು ಸಮಗ್ರ ಸುದ್ದಿ

ಧರ್ಮಸ್ಥಳದಲ್ಲಿ ಗ್ರಾಮದಲ್ಲಿ ಶವಗಳಿಗೆ ಶೋಧ ಮಾಡುವಾಗ ಸಿಕ್ತು ಮಹತ್ವದ ಕುರುಹು!

Share It

ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ SIT ಅಧಿಕಾರಿಗಳಿಗೆ ಮಣ್ಣು ಅಗೆಯುವಾಗ ರವಿಕೆ, ಒಂದು ಪ್ಯಾನ್ ಕಾರ್ಡ್​, ಡೆಬಿಟ್ ಕಾರ್ಡ್ ಪತ್ತೆಯಾಗಿದೆ.

ನೇತ್ರಾವತಿ ನದಿ ತಟದಲ್ಲಿ ಅಗೆಯುವ ಸಂದರ್ಭ ದೊರೆತ ಪ್ಯಾನ್ ಕಾರ್ಡ್​, ಡೆಬಿಟ್ ಕಾರ್ಡ್ ಸಿಕ್ಕಿದೆ ಎಂದು ದೂರುದಾರನ ಪರ ವಕೀಲ ಮಂಜುನಾಥ್‌ ಎನ್‌ ಹೇಳಿದ್ದಾರೆ. ಈ ಸಂಬಂಧ ಮಾಧ್ಯಮಗಳಿಗೆ ಎಸ್‌ಐಟಿ ಮೂಲಗಳನ್ನು ಆಧಾರಿಸಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ವಕೀಲ ಮಂಜುನಾಥ್‌ ಪತ್ರಿಕಾ ಹೇಳಿಕೆ

ಸೈಟ್ ಸಂಖ್ಯೆ 1 ರಲ್ಲಿ ಸುಮಾರು 2.5 ಅಡಿ ಆಳದಲ್ಲಿ ಹರಿದ ಕೆಂಪು ರವಿಕೆ, ಪ್ಯಾನ್ ಕಾರ್ಡ್ ಮತ್ತು ಎಟಿಎಂ ಕಾರ್ಡ್ ಪತ್ತೆಯಾಗಿದೆ. ಒಂದು ಕಾರ್ಡ್‌ನಲ್ಲಿ ಪುರುಷನ ಹೆಸರು ಇದ್ದರೆ ಇನ್ನೊಂದು ಕಾರ್ಡ್‌ನಲ್ಲಿ ಲಕ್ಷ್ಮಿ ಎಂಬ ಮಹಿಳೆಯ ಹೆಸರು ಇದೆ.

ಸಾಕ್ಷ್ಯಗಳು ಸಿಕ್ಕಿದ ಕಾರಣ ನಮಗೆ ಹೊಸ ಭರವಸೆ ಮೂಡಿದೆ. ನಾವು ಎಸ್‌ಐಟಿ ಅವರ ಕೆಲಸದಲ್ಲಿ ಸಂಪೂರ್ಣ ನಂಬಿಕೆ ಇಟ್ಟಿದ್ದೇವೆ. ವಿಶೇಷ ತನಿಖಾ ತಂಡ ಶ್ಲಾಘನೀಯ ಕೆಲಸ ಮಾಡುತ್ತಿದೆ.

You cannot copy content of this page