ಹೌದು, ರೇಣುಕಾಸ್ವಾಮಿ ಕೊಲೆ ಆರೋಪಿಯಾಗಿರುವ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಹೈಕೋರ್ಟ್ ನಲ್ಲಿ ಬೇಲೆ ತೆಗೆದುಕೊಂಡು ಡೆವಿಲ್ ಚಲನಚಿತ್ರದ ಶೂಟಿಂಗ್ ಗೆ ಥೈಲ್ಯಾಂಡ್ ಗೆ ಹೋಗಿದ್ದರು. ಈ ನಡುವೆ ಹೈಕೋರ್ಟ್ ನಲ್ಲಿ ಕೊಲೆ ಆರೋಪಿಗಳಿಗೆ ನೀಡಿರುವ ಬೇಲ್ ಪ್ರಶ್ನೆ ಮಾಡಿ ರಾಜ್ಯ ಸರಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ದರ್ಶನ್ ವಿದೇಶದಲ್ಲಿದ್ದಾಗಲೇ ಸುಪ್ರೀಂ ಕೋರ್ಟ್ ಸಹ ಈ ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು.
ಬೇಲ್ ಟೆನ್ಷನ್ ನಡುವೆಯೂ ದರ್ಶನ್ ವಿದೇಶದಲ್ಲಿ ಶೂಟಿಂಗ್ ಮುಗಿಸಿ ಶುಕ್ರವಾರ ರಾತ್ರಿ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ದೇವನಹಳ್ಳಿ ತಾಲ್ಲೂಕಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಕ್ಕೆ ಆಗಮಿಸಿ ಕುಟುಂಬದ ಜೊತೆ ಮನೆಯತ್ತ ಕಾರಿನಲ್ಲಿ ಪ್ರಯಾಣ ಬೆಳೆಸಿದರು.
ಸುಪ್ರೀಂ ಅಂಗಳದಲ್ಲಿ ಬೇಲ್ ಟೆನ್ಷನ್ ಇದ್ದರೂ ಸಹ ತಮ್ಮ ಪರ ತೀರ್ಪು ಬರುವ ವಿಶ್ವಾಸದಲ್ಲಿ ನಟ ದರ್ಶನ್ ಇರುವುದು ಏರ್ಪೋರ್ಟ್ ನಲ್ಲಿ ಕಂಡಿತ್ತು.