
ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿರುವ ಹಳೆಯ 11 ಕೆವಿ ಬ್ರೇಕರ್ಗಳನ್ನು ಬದಲಾವಣೆ ಮಾಡುವ ಕಾಮಗಾರಿಯನ್ನು ಕೆ.ವಿ.ಪ್ರ.ನಿ.ನಿ ವಿಭಾಗದವರು 27/07/2025 ರಂದು ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಕೈಗೊಂಡಿದ್ದಾರೆ.
ಈ ಕಾರಣ ದೇವನಹಳ್ಳಿ ತಾಲ್ಲೂಕು ಬೇಗೂರು ವಿದ್ಯುತ್ ಸ್ವೀಕರಣ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ದೇವನಹಳ್ಳಿ ತಾಲ್ಲೂಕಿನ ಯರ್ತಿಗಾನಹಳ್ಳಿ, ಭುವನಹಳ್ಳಿ, ದೊಡ್ಡಸಣ್ಣೆ, ಕನ್ನಮಂಗಲ, ಸಾದಹಳ್ಳಿ, ಐವಿಸಿ ರಸ್ತೆ, ಬಿಸ್ಲೆರಿ ಕಾರ್ಖಾನೆ ಹಾಗೂ ಅಮೀನ್ ಪ್ರಾಪರ್ಟಿಸ್ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ದೇವನಹಳ್ಳಿಯ ಸಹಾಯಕ ಕಾರ್ಯನಿರ್ವಾಹಕ ಇಂಜನಿಯರ್ ಲಕ್ಷ್ಮೀಕಾಂತ್ .ಬಿ.ಎಂ ಪ್ರತಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
