ಇಂದು ಯಲಹಂಕ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಫಿಟ್ ಇಂಡಿಯಾ ಫಿಟ್ ಯಲಹಂಕ ವಾಕಥಾನ್ ಹಮ್ಮಿಕೊಳ್ಳಲಾಗಿತ್ತು. ಶಾಸಕ ಎಸ್.ಆರ್.ವಿಶ್ವನಾಥ್ ನೇತೃತ್ವದಲ್ಲಿ ಅಭಿಯಾನ ಏರ್ಪಡಿಸಿದ್ದು, ಸಾವಿರಾರು ಸಾರ್ವಜನಿಕರು ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಶಾಸಕ ಎಸ್ ಆರ್ ವಿಶ್ವನಾಥ್ ಸತ್ಯಹರಿಶ್ಚಂದ್ರ ಚಲನಚಿತ್ರದ ಕುಲದಲ್ಲಿ ಕೀಳಾವುದೋ ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕಿದರು.

ಸುಮಾರು 5 ಕಿ.ಮೀ ನಷ್ಟು ವಾಕಥಾನ್ ಮೂಲಕ ಕೆರೆಗಳ ಹಾಗೂ ಆರೋಗ್ಯದ ಮಹತ್ವ ತಿಳಿಸಲಾಯಿತು. ಯಲಹಂಕದ ಕೆರೆ ಏರಿ ಮೇಲೆ ಈ ವಾಕಥಾನ್ ನಡೆಸಲಾಯಿತು.