
ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಕೇಸ್ ನಲ್ಲಿ ಆರೋಪಿಯಾಗಿರುವ ಶಾಸಕ ಬೈರತಿ ಬಸವರಾಜ್ ನೆನ್ನೆ ಪೊಲೀಸರ ಮುಂದೆ ಹಾಜರಾಗಿದ್ದರು. ಮೂವರು ಎಸಿಪಿ ಗಳು ಸತತ ನಾಲ್ಕು ಗಂಟೆ ಬೈರತಿ ಬಸವರಾಜ್ ವಿಚಾರಣೆ ನಡೆಸಿದ್ದಾರೆ.
ಕೆ.ಜಿ.ಹಳ್ಳಿ ಎಸಿಪಿ ಪ್ರಕಾಶ್ ರಾಥೋಡ್, ಹಲಸೂರು ಎಸಿಪಿ ರಂಗಪ್ಪ ಹಾಗೂ ಭಾರತಿ ನಗರ ಎಸಿಪಿ ಗೀತಾ ನೇತೃತ್ವದಲ್ಲಿ ವಿಚಾರಣೆ ನಡೆದಿದ್ದಾರೆ. ಸರಿಸುಮಾರು 100 ಕ್ಕೂ ಹೆಚ್ಚು ಪ್ರಶ್ನೆಗಳನ್ನು ಸಿದ್ಧಪಡಿಸಿಕೊಂಡಿದ್ದ ಪೊಲೀಸರು ಬೈರತಿಗೆ ನಾಲ್ಕು ಗಂಟೆಗಳ ಕಾಲ ವಿಚಾರಿಸಿದ್ದಾರೆ.
ಜಮೀನು ವ್ಯಾಜ್ಯದಲ್ಲಿ ನಿಮ್ಮ ಹೆಸರು ಯಾಕೆ ಬಂತು? ಫೆಬ್ರವರಿಯಲ್ಲಿ ನೀಡಿದ ದೂರಿನಲ್ಲಿ ನಿಮ್ಮ ಹೆಸರು ಸಹ ಉಲ್ಲೇಖವಾಗಿದೆ. ಕುಮ್ಮಕ್ಕು ಕೊಟ್ಟ ಆರೋಪ ನಿಮ್ಮ ಮೇಲಿದೆ ಎಂಬುದರ ಜೊತೆಗೆ ಬಸವರಾಜ್ ವಿರುದ್ಧ ಲಭ್ಯವಿರುವ ಸಾಕ್ಷ್ಯಗಳು ಮತ್ತು ಆರೋಪಗಳ ಬಗ್ಗೆ ವಿಚಾರಣೆ ನಡೆಸಿ ಪೊಲೀಸರು ವಿಡಿಯೋಗ್ರಾಫಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೈರತಿ, ಎಸಿಪಿ ಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ನನ್ನದು ಪ್ರಕರಣದಲ್ಲಿ ಯಾವುದೇ ಪಾತ್ರವಿಲ್ಲ, ಏನೆಲ್ಲ ಪ್ರಶ್ನೆ ಕೇಳಿದ್ದೇನೆ ಅದಕ್ಕೆ ಉತ್ತರ ನೀಡಿದ್ದೇನೆ. ಮತ್ತೆ ಬುಧವಾರ ವಿಚಾರಣೆಗೆ ಹಾಜರಾಗಬೇಕು ಎಂದು ಹೇಳಿದ್ದಾರೆ. ನನಗೂ ಜಗದೀಶ್ ಗೂ ಯಾವುದೇ ಪರಿಚಯವಿಲ್ಲ ಎಂದು ಹೇಳಿದ್ದೇನೆ ಎಂದರು.