
ಅಂತೂ ಧರ್ಮಸ್ಥಳದಲ್ಲಿ ಮಹಿಳೆಯರ ಸಾವು ಪ್ರಕರಣವನ್ನು ರಾಜ್ಯ ಸರಕಾರ ಎಸ್ ಐಟಿಗೆ ವಹಿಸಿ ಆದೇಶ ಹೊರಡಿಸಿದ್ದು, ಮಹಿಳೆಯರ ಸಾವಿಗೆ ನ್ಯಾಯ ಸಿಗಬೇಕು ಎಂದು ಹೋರಾಟ ನಡೆಸುತ್ತಿದ್ದ ಹೋರಾಟಗಾರರ ಧ್ವನಿಗೆ ರಾಜ್ಯ ಸರಕಾರ ಸ್ಪಂದಿಸಿದಂತಾಗಿದೆ.

ಪ್ರಣವ್ ಮೊಹಂತಿ, ಎಂಎನ್ ಅನುಚೇತ್, ಸೌಮ್ಯಲತಾ ಹಾಗೂ ಜಿತೇಂದ್ರ ಕುಮಾರ್ ಸೇರಿದಂತೆ ನಾಲ್ಕು ಮಂದಿ ಐಪಿಎಸ್ ಅಧಿಕಾರಿಗಳ ನೇತೃತ್ವದಲ್ಲಿ ತನಿಖಾ ತಂಡ ರಚನೆ ಮಾಡಲಾಗಿದೆ.

