
ರಾಜ್ಯ ಹೈಕೋರ್ಟ್ ನಲ್ಲಿ ಜಾಮೀನು ಪಡೆದು ಸದ್ಯ ವಿದೇಶದಲ್ಲಿ ಶೂಟಿಂಗ್ ನಲ್ಲಿ ಬ್ಯೂಸಿ ಇರುವ ನಟ ದರ್ಶನ್ ಗೆ ಇದೀಗ ಮತ್ತೊಂದು ಟೆನ್ಷನ್ ಶುರುವಾಗಿದೆ. ದರ್ಶನ್ ಮತ್ತು ಪವಿತ್ರಾಗೌಡ ಸೇರಿದಂತೆ ಏಳು ಮಂದಿಗೆ ಶುರುವಾಗಿದೆ ಟೆನ್ಷನ್.
ರಾಜ್ಯ ಸರಕಾರ ಜಾಮೀನು ರದ್ದು ಕೋರಿ ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ಇಂದು ವಿಚಾರಣೆಗೆ ಬರಲಿದೆ. ನ್ಯಾ. ಜೆ.ಬಿ. ಪಾರ್ದಿವಾಲ ಮತ್ತು ಆರ್. ಮಹದೇವನ್ ಅವರ ದ್ವಿಸದಸ್ಯ ವಿಭಾಗೀಯ ಪೀಠದಲ್ಲಿ ವಿಚಾರಣೆ ನಡೆಯಲಿದೆ.

ಆದರೆ ನಟ ದರ್ಶನ್ ಡೆವಿಲ್ ಸಿನಿಮಾ ಶೂಟಿಂಗ್ ಸಲುವಾಗಿ ನಿನ್ನೆ ಥೈಲ್ಯಾಂಡ್ ತೆರಳಿದ್ದು, ಇಂದು ಸುಪ್ರೀಂ ವಿಚಾರಣೆ ಕೈಗೆತ್ತಿಕೊಂಡಿರುವುದು ದರ್ಶನ್ ಎದೆಯಲ್ಲಿ ಢವ ಢವ ಶುರುವಾಗುವಂತೆ ಮಾಡಿದೆ. ಇಂದೇ ವಿಚಾರಣೆಯಾಗಿ ಇಂದೇ ತೀರ್ಪು ಪ್ರಕಟಣೆಯಾಗುವ ಸಾಧ್ಯತೆ ಸಹ ಇದೆ.