
ಸಿಗರೇಟ್ ಕಿಡಿ ತಗುಲಿ ಮನೆ ಹೊತ್ತಿ ಉರಿದಿದು ಬೆಂಕಿಯ ಕೆನ್ನಾಲೆಗೆಗೆ ಸಿಲುಕಿ ವ್ಯಕ್ತಿಯೋರ್ವ ಸಜೀವವಾಗಿ ದಹನವಾಗಿರುವ ಘಟನೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಕನ್ನಮಂಗಲ ಕಾಲೋನಿಯಲ್ಲಿ ಅವಘಡ ಸಂಭವಿಸಿದೆ.

ಘಟನೆಯಲ್ಲಿ 35 ವರ್ಷ ವಯಸ್ಸಿನ ಉದಯ್ ಕುಮಾರ್ ಎಂಬಾತ ಸಜೀವವಾಗಿ ಸುಟ್ಟು ಹೋಗಿದ್ದಾನೆ. ತಾಯಿ ಮನೆಯಲ್ಲಿ ಇಲ್ಲದಿರುವ ವೇಳೆ ಉದಯ್ ಕಂಠಪೂರ್ತಿ ಕುಡಿದು ಬರುತ್ತಿದ್ದನಂತೆ. ಈಗೆ ಕುಡಿದು ಬಂದಿದ್ದ ವೇಳೆ ಮನೆಯಲ್ಲಿದ್ದ ಬಟ್ಟೆಯ ರಾಶಿಯ ಮೇಲೆ ಸಿಗರೇಟ್ ನ್ನು ಎಸೆದಿದ್ದಾನೆ. ಬಟ್ಟೆ ಮೇಲೆ ಬಿದ್ದ ಸಿಗರೇಟ್ ಕಿಡಿ ಹೊತ್ತಿ ಉರಿದಿದೆ. ಕುಡಿದ ನಶೆಯಲ್ಲಿದ್ದ ಉದಯ್ ಗೆ ಬೆಂಕಿ ಹೊತ್ತಿ ಉರಿಯುತ್ತಿರುವುದು ಅರಿವಿಗೆ ಬಾರದೆ ಸುಟ್ಟು ಕರಕಲಾಗಿದ್ದಾನೆ.
ದೊಡ್ಡಬೆಳವಂಗಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.