
ಹೌದು, ರಾಜ್ಯದ ಸಾವಿರಾರು ಬೇಕರಿ, ಕಾಂಡಿಮೆಂಟ್ಸ್ ಮತ್ತು ಟೀ ಕಾಫಿ ಅಂಗಡಿಗಳಿಗೆ ಕೋಟ್ಯಾಂತರ ರೂಪಾಯಿ ಟ್ಯಾಕ್ಸ್ ಕಟ್ಟುವಂತೆ ಕಮರ್ಷಿಯಲ್ ಟ್ಯಾಕ್ಸ್ ಡಿಪಾರ್ಟ್ಮೆಂಟ್ ನಿಂದ ಶೋಕಾಸ್ ನೋಟಿಸ್ ನೀಡಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದ ಬೇಕರಿ ಮತ್ತು ಕಾಂಡಿಮೆಂಟ್ಸ್ ವ್ಯಾಪಾರಿಗಳು ಬೃಹತ್ ಸಭೆ ನಡೆಸುತ್ತಿದ್ದಾರೆ. ಬೆಂಗಳೂರಿನ ರಾಜಾಜಿನಗರದ ಖಾಸಗಿ ಹೋಟೆಲ್ ನಲ್ಲಿ ಸಭೆ ನಡೆಸುತ್ತಿದ್ದು, ಜುಲೈ 23,24,25 ರಂದು ರಾಜ್ಯದಲ್ಲಿ ಬೃಹತ್ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ಜುಲೈ 23,24 ರಂದು ಹಾಲಿನ ಮಾರಾಟ ಬಂದ್!
ಜುಲೈ 21 ರೊಳಗೆ ಟ್ಯಾಕ್ಸ್ ಪಾವತಿ ಮಾಡುವಂತೆ ಕಮರ್ಷಿಯಲ್ ಟ್ಯಾಕ್ಸ್ ಡಿಪಾರ್ಟಮೆಂಟ್ ಗಡುವು ನೀಡಿದ್ದು, ಜುಲೈ 23 ಮತ್ತು 24 ರಂದು ರಾಜ್ಯದ ಎಲ್ಲಾ ಬೇಕರಿ, ಕಾಂಡಿಮೆಂಟ್ಸ್ ಮತ್ತು ಎಲ್ಲಾ ಅಂಗಡಿಗಳಲ್ಲಿ ಹಾಲಿನ ಮಾರಾಟ ಬಂದ್ ಮಾಡಲು ನಿರ್ಧಾರ ಮಾಡಲಾಗಿದೆ. ಬೆಂಗಳೂರಿನಲ್ಲಿ ಮಾತ್ರ 66 ಸಾವಿರ ಕಾಂಡಿಮೆಂಟ್ಸ್ ಮತ್ತು ಬೇಕರಿಗಳಿವೆ ಎಂದು ಅಂದಾಜಿಸಲಾಗಿದ್ದು, ಇದರಿಂದ ಸಾರ್ವಜನಿಕರಿಗೆ ದೊಡ್ಡ ಮಟ್ಟದ ತೊಂದರೆ ಉಂಟಾಗಲಿದೆ.
ಜುಲೈ 25 ರಂದು ಸಂಪೂರ್ಣ ಬಂದ್!
ಇನ್ನು ಜುಲೈ 25 ರಂದು ರಾಜ್ಯದ ಎಲ್ಲಾ ಬೇಕರಿ , ಕಾಂಡಿಮೆಂಟ್ಸ್ ಮತ್ತು ಟೀ ಕಾಫಿ ಅಂಗಡಿಗಳು ಬಂದ್ ಮಾಡಲು ನಿರ್ಧರಿಸಲಾಗಿದ್ದು, ಎಲ್ಲಾ ವ್ಯಾಪಾರಿಗಳು ಕುಟುಂಬ ಸಮೇತ ಬೆಂಗಳೂರಿನ ಪ್ರೀಡಂ ಪಾರ್ಕ್ಗೆ ಬಂದು ಹೋರಾಟ ನಡೆಸಲು ನಿರ್ಧಾರ ಮಾಡಲಾಗಿದೆ. ಕೋಟ್ಯಾಂತರ ರೂಪಾಯಿ ಟ್ಯಾಕ್ಸ್ ಹಾಕಿರುವ ನಿರ್ಧಾರದಿಂದ ಇಲಾಖೆ ಹಿಂದಕ್ಕೆ ಸರಿಯಬೇಕು ಎಂಬುದು ಇವರ ಒಕ್ಕೊರಲ ಮನವಿಯಾಗಿದೆ.