
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಮೇಲೆ ಜಾತಿ ನಿಂದನೆ ಆರೋಪದ ಮೇಲೆ ಅಟ್ರಾಸಿಟಿ ಕೇಸ್ ದಾಖಲಾಗಿರುವ ಘಟನೆ ನಡೆದಿದೆ. ನಿರ್ದೇಶಕಿ ಗಾಯತ್ರಿ ಮೇಲೆ ಬೆಂಗಳೂರಿನ ಎಸ್ ಜೆ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಜಾನಪದ ಕಲಾವಿದರಾದ ಜೋಗಿಲ ಸಿದ್ಧರಾಜು ಎಂಬಾತ ನೀಡಿದ ದೂರಿನ ಆಧಾರದ ಮೇಲೆ ಎಫ್ ಐ ಆರ್ ದಾಖಲಿಸಲಾಗಿದೆ. ಅಂದಹಾಗೆ ಜೋಗಿಲ ಸಿದ್ದಪ್ಪ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಲವು ಕಾರ್ಯಕ್ರಮಗಳನ್ನು ನಡೆಸುಕೊಂಡು ಬರುತ್ತಿದ್ದು, ಕಳೆದ ಮೂರು ವರ್ಷಗಳಿಂದ ಸಿದ್ಧಪ್ಪನಿಗೆ ಸಂಭಾವನೆ ಹಣ ಸಂದಾಯವಾಗಿರಲಿಲ್ಲವಂತೆ. ಈ ಸಂಬಂಧ ವಿಚಾರಿಸಲು ಜುಲೈ 11 ರಂದು ಇಲಾಖೆ ಕಚೇರಿಗೆ ತೆರಳಿದ್ದಾರೆ.

ಈ ವೇಳೆ ಗಾಯತ್ರಿಯವರು ಅವಾಚ್ಯ ಶಬ್ದದಿಂದ ನನ್ನ ಜಾತಿಯನ್ನು ನಿಂಧಿಸಿದ್ದಾರೆ. ಜೊತೆಗೆ ನನ್ನ ಜೊತೆಯಲ್ಲಿದ್ದವರ ಮೇಲೆ ಸಹ ಕಂಪ್ಯೂಟರ್ ಮೌಸ್ ನಿಂದ ಹಲ್ಲೆ ಮಾಡಿದ್ದಾರೆ. ಈ ಎಲ್ಲಾ ದೃಶ್ಯಗಳು ಕಚೇರಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ ಎಂದು ಸಿದ್ಧಪ್ಪ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಸಂಬಂಧ ಪೊಲೀಸರು ಗಾಯತ್ರಿಯವರಿಗೆ ನೋಟಿಸ್ ನೀಡಿದ್ದಾರೆ.