ಹೊಸಕೋಟೆ – ದಾಬಸ್ ಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಡಗಲೇ ಕಾರೊಂದು ಬುಲೆಟ್ಗೆ ಡಿಕ್ಕಿ ಹೊಡೆದ ಪರಿಣಾಮ ಬುಲೆಟ್ ನಲ್ಲಿದ್ದ ಇಬ್ಬರು ಸವಾರರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಬುಲೆಟ್ಗೆ ಡಿಕ್ಕಿ ಹೊಡೆದ ನಂತರ ಕಾರಿನ ಚಾಲಕ ಕಾರನ್ನು ನಿಲ್ಲಿಸದೆ ಕಾರಿಗೆ ಸಿಲುಕಿಕೊಂಡಿದ್ದ ಬುಲೆಟ್ ನ್ನು ಸುಮಾರು 50 ಮೀಟರ್ ನಷ್ಟು ದೂರ ಎಳೆದುಕೊಂಡು ಹೋಗಿದ್ದಾನೆ. ನಂತರ ಘಟನಾ ಸ್ಥಳದಿಂದ ಕಾಲ್ಕಿತ್ತಿದ್ದಾನೆ.

ಅಪಘಾತದಲ್ಲಿ ಮೃತಪಟ್ಟವರು ಮೂಲತಃ ಆಂಧ್ರಪ್ರದೇಶದ ವರು ಎಂದು ತಿಳಿದುಬಂದಿದೆ. ದೇವನಹಳ್ಳಿ ಯಿಂದ ದೊಡ್ಡಬಳ್ಳಾಪುರ ದ ಕಡೆ ತೆರಳುತ್ತಿರುವಾಗ ದೇವನಹಳ್ಳಿ ತಾಲ್ಲೂಕಿನ ವಿಶ್ವನಾಥಪುರ ಬಳಿ ಹಿಂಬದಿಯಿಂದ ಬಂದ ಕಾರು ಬುಲೆಟ್ಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಅದೃಷ್ಟವಶಾತ್ ಘಟನೆ ನಡೆದ ಸ್ಥಳದಲ್ಲಿ ರಾಂಗ್ ರೂಟ್ನಲ್ಲಿ ಬರ್ತಿದ್ದ ಬೈಕ್ ಸವಾರ ಕೂದಲೆಳೆ ಅಂತರದಲ್ಲಿ ಅಪಘಾತದಿಂದ ಪಾರಾಗಿದ್ದಾನೆ.