
ಹೌದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ದೇವಾಲಯದ ಹುಂಡಿಗೆ ಒಂದೇ ತಿಂಗಳಲ್ಲಿ ಕಂತೆ ಕಂತೆ ದುಡ್ಡು ಹರಿದು ಬಂದಿದೆ. ಜೂನ್ ತಿಂಗಳಿನಲ್ಲಿ ಸಂಗ್ರಹವಾಗಿದ್ದ ಹುಂಡಿ ಹಣವನ್ನು ಅಧಿಕಾರಿಗಳು ಎಣಿಕೆ ಮಾಡಿದ್ದು, ಸುಬ್ರಮಣ್ಯ ಸ್ವಾಮಿಗೆ ಭಕ್ತರು ಅಪಾರ ಪ್ರಮಾಣದಲ್ಲಿ ಕಾಣಿಕೆ ಸಮರ್ಪಿಸಿರುವುದು ಕಂಡುಬಂದಿದೆ.
ಒಂದು ಲಕ್ಷ ಎಪ್ಪತ್ನಾಲ್ಕು ಸಾವಿರದ ನೂರ ನಲವತ್ತು ರೂಪಾಯಿ ಮೌಲ್ಯದ ನಾಣ್ಯಗಳು. ಆರವತ್ತು ಲಕ್ಷದ ಇಪ್ಪತ್ತಮೂರು ಸಾವಿರ ಎಂಟನೂರು ಒಂದು ರೂಪಾಯಿ ಮೌಲ್ಯದ ನೋಟುಗಳು ಹಾಗೂ ನಾಲ್ಕು ಲಕ್ಷ ಇಪ್ಪತ್ತು ಸಾವಿರ ರೂಪಾಯಿ ಮೌಲ್ಯದ ಚಿನ್ನ ಬೆಳ್ಳಿ ಹುಂಡಿಯಲ್ಲಿ ದೊರೆತಿದೆ. ಒಟ್ಟಾರೆ ಒಂದು ತಿಂಗಳಲ್ಲಿ ಹುಂಡಿಯಲ್ಲಿ 66,18,741 ರೂಪಾಯಿ ದೊರೆತಿದೆ.
ಹುಂಡಿ ಎಣಿಕೆ ಕಾರ್ಯದಲ್ಲಿ ದೇವಾಲಯದ ಕಾರ್ಯದರ್ಶಿ ಪಿ. ದಿನೇಶ್ ರವರು ಉಪ ಕಾರ್ಯದರ್ಶಿ ಎಂ. ನಾರಾಯಣಸ್ವಾಮಿ ಮುಜರಾಯಿ ಇಲಾಖೆ ತಹಸಿಲ್ದಾರ್ ಜಿ.ಜೆ .ಹೇಮಾವತಿ ರವರು ಪ್ರಧಾನ ಅರ್ಚಕರು ಶ್ರೀನಿಧಿ ದೇವಾಲಯದ ನಂಜಪ್ಪ ದೇವಾಲಯದ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರು ಜೆ.ಎನ್. ರಂಗಪ್ಪ ಎಸ್. ರವಿ ಲಕ್ಷ್ಮ ನಾಯಕ್ ಆರ್. ವಿ. ಮಹೇಶ್ ಕುಮಾರ್ ಶ್ರೀಮತಿ ಹೇಮಲತಾ ರಮೇಶ್ ಪೊಲೀಸ್ ಇಲಾಖೆ ಸಿಬ್ಬಂದಿ ದೇವಾಲಯದ ಸಿಬ್ಬಂದಿ .ಕೆನರಾ ಬ್ಯಾಂಕ್ ಸಿಬ್ಬಂದಿ ದೇವಾಲಯಕ್ಕೆ ಬಂದ ಭಕ್ತಾದಿಗಳ ಸಮ್ಮುಖದಲ್ಲಿ ಹುಂಡಿ ಎಣಿಕೆ ಮಾಡಲಾಯಿತು.