
ಇಂದು ಚಿಕ್ಕಬಳ್ಳಾಪುರ ದ ನಂಧಿಗಿರಿಧಾಮದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದ್ದು, ಸಭೆಯಲ್ಲಿ ರಾಜ್ಯದ ಎಲ್ಲಾ ಸಂಪುಟ ದರ್ಜೆ ಸಚಿವರ ಭಾಗಿಯಾಗಲಿದ್ದಾರೆ. ಸಭೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಸಂಬಂಧಪಟ್ಟ ವಿಷಯಗಳೊಂದಿಗೆ ಪ್ರಮುಖವಾಗಿ ಬಯಲುಸೀಮೆ ಜಿಲ್ಲೆಗಳಿಗೆ ಸಂಬಂಧಪಟ್ಟ ಪ್ರಮುಖ ವಿಷಯಗಳು ಚರ್ಚೆಗೆ ಬರಲಿವೆ.

ಸಂಪುಟ ಸಭೆಯಲ್ಲಿ ಚರ್ಚೆಗೆ ಬರಲಿರುವ ಪ್ರಮುಖ ವಿಚಾರಗಳು:-
1.ಚಿಕ್ಕಬಳ್ಳಾಪುರ,ಧಾರವಾಡ,ಉಡುಪಿ,ವಿಜಯಪುರ ,ಕೋಲಾರ ,ಬಾಗಲಕೋಟೆ ಸೇರಿದಂತೆ ಒಟ್ಟು 8 ಪ್ರಾಥಮಿಕ ಕೇಂದ್ರಗಳನ್ನು 46ಕೋಟಿ ವೆಚ್ಚದಲ್ಲಿ ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮಾಡುವುದಕ್ಕೆ ಆಡಳಿತಾತ್ಮಕ ಅನಮೋದನೆ ನೀಡುವುದು
- ಕೋಲಾರ ಜಿಲ್ಲೆಯ ಬಾಲಕರ,ಬಾಲಕಿಯರ ಸರ್ಕಾರಿ ಕಾಲೇಜನ್ನು ಕ್ರಮೇಣವಾಗಿ 4000 ಮತ್ತು 2000 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಬಗ್ಗೆ ಆಡಳಿತಾತ್ಮಕ ಅನುಮೋದನೆ
- ಬೆಂಗಳೂರು ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್ ಎರಡನೇ ಹಂತದ ಅಭಿವೃದ್ಧಿ ಕಾಮಗಾರಿಯನ್ನು 123.50ಕೋಟಿ ಯಲ್ಲಿ ಕೈ ಗೊಳ್ಳುವ ಬಗ್ಗೆ
- ಅಂತರಾಷ್ಟ್ರೀಯ ಪುಷ್ಟ ಹರಾಜು ಬೆಂಗಳೂರು ನಿಯಮಿತ ಸಂಸ್ಥೆಯನ್ನು 10.00ಕೋಟಿ ಮೊತ್ತದಲ್ಲಿ ನಬಾರ್ಡ್ – RIDF 30ರಡಿ ಅಭಿವೃದ್ಧಿ ಪಡಿಸುವ ಯೋಜನೆ ಬಗ್ಗೆ ಅನುಮೋದನೆ ನೀಡುವ ಬಗ್ಗೆ
- ಚಿಕ್ಕಬಳ್ಳಾಪುರ, ಭಕ್ತರಹಳ್ಳಿ ಅರಸೀಕರೆಯ ಕೆಳಭಾಗದಲ್ಲಿ 36.00 ಕೋಟಿ ವೆಚ್ಚದಲ್ಲಿ ಹೊಸ ಕೆರೆ ನಿರ್ಮಾಣ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡೋ ಬಗ್ಗ
- ಮಾಗಡಿ ತಾಲೂಕಿನ ನಾಡಪ್ರಭು ಕೆಂಪೇಗೌಡ ಕೋಟೆ ನವೀಕರಣ ಒಟ್ಟು 103.00 ಕೋಟಿಗಳ ಮೊತ್ತ
- ಚಿಕ್ಕಬಳ್ಕಾಪುರ ಜಿಲ್ಲೆಯ ಬಾಗೇಪಲ್ಲಿ ಹೆಸರನ್ನು ಭಾಗ್ಯನಗರ ಎಂದು ನಾಮಕರಣ ಮಾಡುವುದು
- ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಸರನ್ನು ಬೆಂಗಳೂರು ಉತ್ತರ ಜಿಲ್ಲೆ ಎಂದು ಮರುನಾಮಕರಣ ಮಾಡುವ ಬಗ್ಗೆ
- ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಕಲಾಸಿಪಾಳ್ಯ ಬಸ್ ನಿಲ್ದಾಣಕ್ಕೆ ಜನೋಪಕಾರಿ ಶ್ರೀ ದೊಡ್ಡಣ್ಣ ಶೆಟ್ಟರ ಕಲಾಸಿಪಾಳ್ಯ ಬಸ್ ನಿಲ್ದಾಣ ಎಂದು ಮರುನಾಮಕರಣ ಮಾಡೋ ಬಗ್ಗೆ
- ಕೋಲಾರ ನಗರದಲ್ಲಿ ನಾಗರಿಕ ಸೌಲಭ್ಯ ಗಾಂಧಿ ಭವನ ನಿರ್ಮಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಉಚಿತವಾಗಿ ಮಂಜೂರು ಮಾಡುವ ಬಗ್ಗೆ
- ವೇದಾವತಿ ನದಿಗೆ ಅಡ್ಡಲಾಗಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿಯನ್ನು 28.00ಕೋಟಿಗಳ ವೆಚ್ಚದಲ್ಲಿ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ
- ಭದ್ರವತಿ ತಾಲೂಕಿನ ಗೋಣಿಬೀಡು ಗ್ರಾಮದ ಬಳಿ 54.00ಕೋಟಿ ವೆಚ್ಚದಲ್ಲಿ ಭದ್ರಾ ನದಿಯಿಂದ 0.19 ಟಿಎಂಸಿ ನೀರನ್ನೆತ್ತಿ ಕಂಬದಾಳ್ ಹೊಸೂರು,ಸುತ್ತಮುತ್ತಲಿನ ಗ್ರಾಮಗಳಿಗೆ ನೀರು ತುಂಬಿಸುವ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.