ಅಪರಾಧ ಸಮಗ್ರ ಸುದ್ದಿ

ಐಸ್ ಕ್ರೀಂ ಪಾರ್ಲರ್ ಈ ಕಿಡಿಗೇಡಿಗಳು ಮಾಡಿದ ರಾದ್ಧಾಂತ ನೋಡಿ!

Share It


ಐಸ್ ಕ್ರೀಂ ಪಾರ್ಲರ್ ಬಳಿ ಕಿಡಿಗೇಡಿಗಳು ಗೂಂಡಾವರ್ತನೆ ಮಾಡಿದ್ದು, ಇವರು ಮಾಡಿರುವ ರಾದ್ಧಾಂತ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಅಂದಹಾಗೆ ನೆನ್ನೆ ಮಧ್ಯಾಹ್ನ 12.50 ರ ವೇಳೆಗೆ ಇಬ್ಬರು ಅಸಾಮಿಗಳು ಬೆಂಗಳೂರು ನಗರದ ವಿಜಯನಗರ ಎಂಸಿ ಲೇ ಔಟ್ ಬಳಿ ಇರುವ ಪ್ರತಿಷ್ಠಿತ ಐಸ್ ಕ್ರೀಂ ಪಾರ್ಲರ್ ಗೆ ಎಂಟ್ರಿ ಕೊಟ್ಟಿದ್ದಾರೆ. ಇದು ಐಸ್ ಕ್ರೀಂ ಪಾರ್ಲರ್ ಕ್ಲೋಸಿಂಗ್ ಟೈಂ ಆದ ಕಾರಣ ಸಿಬ್ಬಂದಿ ಪಾರ್ಲರ್ ಕ್ಲೋಸ್ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಈ ವೇಳೆ ಟೇಬಲ್ಗೆ ಸರ್ವೀಸ್ ಕೊಡಲು ಸಾಧ್ಯವಿಲ್ಲ. ಪಾರ್ಸಲ್ ತೆಗೆದುಕೊಂಡು ಹೋಗಿ ಎಂದು ಈ ಇಬ್ಬರಿಗೂ ತಿಳಿಸಿದ್ದಾರೆ.


ಇದಕ್ಕೆ ಕೋಪಗೊಂಡು ಇಬ್ಬರು ಕಿಡಿಗೇಡಿಗಳು ಬಿಲ್ಲಿಂಗ್ ಕಂಪ್ಯೂಟರ್ನ್ನು ಬೀಳಿಸಿ ಇನ್ನು ಕೆಲವೇ ಹೊತ್ತಿನಲ್ಲಿ ಶಾಪ್ ಖಾಲಿ ಮಾಡಬೇಕಷ್ಟೆ ಎಂದು ಅವಾಜ್ ಹಾಕಿದ್ದಾರೆ. ಜೊತೆಗೆ ಬಿಲ್ ಕೌಂಟರ್ನಲ್ಲಿದ್ದ ಸಿಬ್ಬಂದಿ ಮೇಲೆ ಸಹ ಹಲ್ಲೆಗೆ ಯತ್ನ ನಡೆಸಿದ್ದಾರೆ. ಇನ್ನು ಈ ಸಂಬಂಧ ಗೋವಿಂದರಾಜನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ.

You cannot copy content of this page