
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಗೆ ಯುವಕನೋರ್ವ ಏಕಾಏಕಿ ನುಗ್ಗಿರುವ ಘಟನೆ ನಡೆದಿದೆ. ಈ ವೇಳೆ ಏರ್ಪೋರ್ಟ್ ಭದ್ರತಾ ಸಿಬ್ಬಂದಿ ಯುವಕನನ್ನು ಬಂಧಿಸಿ ವಿಮಾನ ನಿಲ್ದಾಣ ಪೊಲೀಸರಿಗೆ ಒಪ್ಪಿಸಿದ್ದಾರೆ.
ನ್ಯೂ ಹಾರಿಝನ್ ಕಾಲೇಜ್ ಆಫ್ ಇಂಜಿನಿಯರಿಂಗ್ ನ ಸದಾದ್ ಮೊಹಮ್ಮದ್ ಬಾಬಾ ಎಂಬ ಅಸಾಮಿ ಈ ರೀತಿ ಟರ್ಮಿನಲ್ಗೆ ಏಕಾಏಕಿ ನುಗ್ಗಿದ್ದಾನೆ. ಸದ್ಯಕ್ಕೆ ಯುವಕ ಏರ್ಪೋರ್ಟ್ ಪೊಲೀಸರ ವಶದಲ್ಲಿದ್ದಾನೆ.