ಆರ್ಟಿಓ ಕಚೇರಿಗೆ ಬಾಂಬ್ ಬೆದರಿಕೆ!
ಆರ್ಟಿಓ ಕಚೇರಿಯಲ್ಲಿ ಬಾಂಬ್ ಇಡುವುದಾಗಿ ಬೆದರಿಕೆ ಇ- ಮೇಲ್ ಬಂದಿರುವ ಘಟನೆ ನಡೆದಿದೆ. ಮಂಗಳೂರು ಆರ್ಟಿಓ ಕಚೇರಿಯ ಅಧಿಕೃತ ಮೇಲ್ಗೆ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, 5 ಕಡೆ ಬಾಂಬ್ ಇಡೋದಾಗಿ ಕಿಡಿಗೇಡಿಗಳು ಮೇಲ್ ಮಾಡಿದ್ದಾರೆ.
ನೆನ್ನೆ ರಾತ್ರಿ ವೇಳೆ ಈ ಮೇಲ್ ಬಂದಿದ್ದು, ಅಧಿಕಾರಿಗಳು ಇಂದು ಮಧ್ಯಾಹ್ನ ಇ-ಮೇಲ್ ನೋಡಿದ್ದು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಂಗಳೂರಿನ ಎಸಿಎಸ್ ಮತ್ತು ಬಿಡಿಡಿಎಸ್ ತಂಡದಿಂದ ಪರಿಶೀಲನೆ ನಡೆಸಲಾಗುತ್ತಿದೆ.