
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕು ಚನ್ನರಾಯಪಟ್ಟಣ ಹೋಬಳಿ ಸೋಮತ್ತನಹಳ್ಳಿಯ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಸೋಮವಾರ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಗೋವಿಂದ ರಾಜ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸೋಮತ್ತನಹಳ್ಳಿ ಹಾಲು ಉತ್ಪಾದಕ ಸಹಕಾರ ಸಂಘದಲ್ಲಿ ನಾಮಿನಿ ನಿರ್ದೇಶಕರ ಸೇರಿದಂತೆ ಒಟ್ಟು 12 ನಿರ್ದೇಶಕ ಸ್ಥಾನಗಳಿದ್ದು, ಗೋವಿಂದ ರಾಜ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದರು. ಆದರೆ ಇವರ ಪ್ರತಿಸ್ಪರ್ಧಿಯಾಗಿ ಯಾವೊಬ್ಬ ನಿರ್ದೇಶಕನು ಸ್ಪರ್ಧೆ ಮಾಡದ ಕಾರಣ ಗೋವಿಂದ ರಾಜ್ ರನ್ನು ಚುನಾವಣಾ ಅಧಿಕಾರಿ ಆರ್.ಚೇತನ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ.
ಇನ್ನು ಈ ಸಂದರ್ಭದಲ್ಲಿ ಗಂಗವಾರ ಚೌಡಪ್ಪನಹಳ್ಳಿ ಗ್ರಾಪಂ ಅಧ್ಯಕ್ಷ ಶಿವರಾಜ್, ಗ್ರಾಪಂ ಸದಸ್ಯೆ ಶಾಂತಮ್ಮ ಅಶ್ವತಪ್ಪ ಮತ್ತು ಎಂಪಿಸಿಎಸ್ ಉಪಾಧ್ಯಕ್ಷೆ ಯಶೋದಮ್ಮ, ನಿರ್ದೇಶಕರಾದ ಗಂಗಾಧರ್, ನಂಜೇಗೌಡ, ಅಭಿಜಿತ್, ಪಿಳ್ಳಕೆಂಪಣ್ಣ, ರಾಮಾಂಜಿನಪ್ಪ, ನಾಗರಾಜ್, ವೇಣುಗೋಪಾಲ್, ಕಾಂತಮ್ಮ ನಾಗರಾಜ್ ,ಲಕ್ಷ್ಮಮ್ಮ ರವರುಗಳು ಸೇರಿ ಚುನಾವಣೆಯಲ್ಲಿ ಗೆಲುವಿನ ನಗೆ ಬೀರಿದ ಗೋವಿಂದ್ ರಾಜ್ ರವರಿಗೆ ಪುಷ್ಪಮಾಲೆ ಹಾಕಿ ಅಭಿನಂದನೆ ತಿಳಿಸಿದರು. ಈ ವೇಳೆ ಸೋಮತ್ತನಹಳ್ಳಿ ಗ್ರಾಮಸ್ಥರುಗಳಾದ ಮಹೇಶ್, ಸುಮನ್, ರವಿಚಂದ್ರ, ಚಂದನ್, ಸಂಪತ್, ಅಜಯ್, ಮನೋಜ್ ಹಲವರು ಭಾಗಿಯಾಗಿದ್ದರು.