
ಒಣಗಿ ಹಾಕಿದ್ದ ಬಟ್ಟೆ ತೆಗೆಯುವ ವೇಳೆ ವಿದ್ಯುತ್ ಸ್ಪರ್ಶಿಸಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ರಕ್ಷಿಸಲು ತೆರಳಿದ ಮತ್ತೋರ್ವ ಮಹಿಳೆ ಗಂಭೀರ ಸ್ಥಿತಿಯಲ್ಲಿದ್ದು, ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈ ಘಟನೆ ನಡೆದಿರುವುದು ದೊಡ್ಡಬಳ್ಳಾಪುರ ತಾಲ್ಲೂಕಿನ ಕಾರನಾಳ ಗ್ರಾಮದಲ್ಲಿ. ಗ್ರಾಮದ ಸಂಜಯ್ (45) ಹಾಗೂ ಲಲಿತಮ್ಮ (50) ಮೃತ ದುರ್ದೈವಿಗಳಾಗಿದ್ದಾರೆ. ಅಂದಹಾಗೆ ವಿದ್ಯುತ್ ಕಂಬದಿಂದ ನಿರ್ಮಾಣ ಹಂತದ ಕಟ್ಟಡಕ್ಕೆ ವಿದ್ಯುತ್ ತಂತಿ ಎಳೆದುಕೊಳ್ಳಲಾಗಿದ್ದು, ಈ ತಂತಿ ಹತ್ತಿರವೇ ಬಟ್ಟೆಗಳನ್ನು ಒಣಗಿ ಹಾಕಲಾಗಿತ್ತು. ನಿನ್ನೆ ರಾತ್ರಿ ಬಟ್ಟೆ ತೆಗೆಯಲು ಲಲಿತಮ್ಮ ಹೋಗಿದ್ದು, ಈ ವೇಳೆ ವಿದ್ಯುತ್ ಸ್ಪರ್ಶಿಸಿ ಅವಘಡ ನಡೆದಿದೆ.
ಈ ಸಂದರ್ಭದಲ್ಲಿ ರಕ್ಷಿಸಲು ಹೋದ ಸಂಜಯ್ ಹಾಗೂ ಲಕ್ಷ್ಮಮ್ಮನಿಗೂ ವಿದ್ಯುತ್ ಶಾಕ್ ಹೊಡೆದಿದ್ದು, ಸಂಜಯ್ ಸಾವನ್ನಪ್ಪಿದ್ದರೆ ಲಕ್ಷ್ಮಮ್ಮ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸೇರಿದ್ದಾರೆ.