
ಹೌದು, ದೇಶಾದ್ಯಂತ ಇಂದು ಜನತೆ ವಿಘ್ನ ವಿನಾಶಕನನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಲು ಸಕಲ ಸಿದ್ಧತೆ ಕೈಗೊಂಡಿದ್ದು, ತಮ್ಮ ತಮ್ಮ ಏರಿಯಾಗಳಲ್ಲಿ ಗಣಪನ ಮೂರ್ತಿ ಕೂರಿಸಿ ಸಂಭ್ರಮಿಸುತ್ತಿದ್ದಾರೆ.
ಇನ್ನು ವಿವಿಧ ರೂಪದಲ್ಲಿ ಮೂಡಿಬಂದಿರುವ ವಿನಾಯನನ್ನು ತಮ್ಮ ಏರಿಯಾಗಳಿಗೆ ತರುವಲ್ಲಿ ಯುವಕರ ಗುಂಪುಗಳು ಬ್ಯೂಸಿಯಾಗಿವೆ. ಹಲವು ರೀತಿಯ ವಾಹನಗಳಲ್ಲಿ ಮಾರುಕಟ್ಟೆಯಿಂದ ತಮ್ಮ ಏರಿಯಾಗಳಿಗೆ ಗಣೇಶಮೂರ್ತಿಗಳನ್ನು ತರುತ್ತಿದ್ದಾರೆ. ಆದರೆ ಆಂಬ್ಯುಲೆನ್ಸ್ ನಲ್ಲಿ ಗಣೇಶಮೂರ್ತಿಯನ್ನು ಆಸ್ಪತ್ರೆಯತ್ತ ತೆಗೆದುಕೊಂಡ ಹೋದ ಘಟನೆಯೊಂದು ದೇವನಹಳ್ಳಿ ಯ ಜನತೆಯನ್ನು ಆಶ್ಚರ್ಯಚಕಿತರನ್ನಾಗಿಸಿತ್ತು.

ದೇವನಹಳ್ಳಿ ಯ ಆಸ್ಪತ್ರೆಯ ಸಿಬ್ಬಂದಿಗಳು ತಮ್ಮ ಆಸ್ಪತ್ರೆಯಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪಿಸಲು ಮಾರುಕಟ್ಟೆಯಿಂದ ಗಣೇಶಮೂರ್ತಿ ಯನ್ನು ಆ್ಯಂಬುಲೆನ್ಸ್ ನಲ್ಲಿ ಕೊಂಡೊಯ್ದಿದ್ದಾರೆ.