ಸಮಗ್ರ ಸುದ್ದಿ

ಹಲಸಿನ ಹಣ್ಣು ತಿಂದು ವಾಹನ ಚಲಿಸಿದ್ರೆ ಡ್ರಿಂಕ್ ಅಂಡ್ ಡ್ರೈವ್ ಕೇಸ್!

Share It


ಹೌದು, ಹಲಸಿನ ಹಣ್ಣು ತಿಂದು ಬಸ್ ಚಾಲನೆ ಮಾಡಲು ಬಂದಿದ್ದ ಡ್ರೈವರ್ಗೆ ಆಲ್ಕೋಹಾಲ್ ಪಾಸಿಟೀವ್ ಬಂದಿರುವ ಘಟನೆ ನಡೆದಿದೆ. ಈ ವಿಷಯ ಎಲ್ಲರಿಗೂ ಶಾಕಿಂಗ್ ಆಗಿದ್ರು ಸಹ ನಡೆದಿರುವ ನೈಜ ಘಟನೆಯಿದು. ಬಸ್ ಚಾಲಕನಿಗೆ ಕ್ಯಾಲಿಬ್ರೆಷನ್ (ಡ್ರಿಂಕ್ ಅಂಡ್ ಡ್ರೈವ್ ಚೆಕಿಂಗ್) ಮೆಷಿನ್ನಲ್ಲಿ ಚೆಕ್ ಮಾಡಿದಾಗ ಶೇಕಡ 10 ರಷ್ಟು ಆಲ್ಕೋಹಾಲ್ ಇರುವುದು ಕಂಡು ಬಂದಿದೆ.

ಈ ಘಟನೆ ನಡೆದಿರುವುದು ನಮ್ಮ ನೆರೆಯ ಕೇರಳ ರಾಜ್ಯದಲ್ಲಿ. ಪಂದಳಂ ನ ಕೆಎಸ್ಆರ್ಟಿಸಿ ಡಿಪೋದಲ್ಲಿ ಪ್ರತೀ ದಿನ ವಾಹನ ತೆಗೆಯುವಾಗ ಆಲ್ಕೋಹಾಲ್ ಚೆಕ್ ಮಾಡಲಾಗುತ್ತದೆ. ಈ ವೇಳೆ ಮೂವರು ಡ್ರೈವರ್ಗಳು ಆಲ್ಕೋಹಾಲ್ ಸೇವಿಸಿರುವುದಾಗಿ ಕ್ಯಾಲಿಬ್ರೆಷನ್ ಮಷಿನ್ನಲ್ಲಿ ತೋರಿಸುತ್ತದೆ. ಆದರೆ ನಿಜಕ್ಕೂ ಈ ಡ್ರೈವರ್ಗಳು ಎಣ್ಣೆ ಕುಡಿದಿರುವುದಿಲ್ಲ. ಬದಲಾಗಿ ಮೂವರು ಚಾಲಕರು ಹಲಸಿನ ಹಣ್ಣನ್ನು ತಿಂದಿರುತ್ತಾರೆ.

ಈ ಬಗ್ಗೆ ಸಮಗ್ರ ವಿಚಾರಣೆ ಮಾಡಿದ ಅಲ್ಲಿನ ಅಧಿಕಾರಿಗಳು ಆಲ್ಕೋಹಾಲ್ ನೆಗೆಟೀವ್ ಬಂದ ಡ್ರೈವರ್ಗೆ ಹಲಸಿನ ಹಣ್ಣನ್ನು ತಿನ್ನಲು ಹೇಳಿ ತದನಂತರ ತಪಾಸಣೆಗೆ ಒಳಪಡಿಸುತ್ತಾರೆ. ಈ ವೇಳೆ ಶೇಕಡ 10 ರಷ್ಟು ಆಲ್ಕೋಹಾಲ್ ಸೇವಿಸಿರುವುದಾಗಿ ಮಷಿನ್ನಲ್ಲಿ ತೋರಿಸುತ್ತದೆ. ಇದನ್ನು ಗಮನಿಸಿದ ಅಧಿಕಾರಿಗಳು ಶಾಕ್ಗೆ ಗುರಿಯಾಗುತ್ತಾರೆ.

ಈ ಡ್ರೈವರ್ಗಳು ತಿಂದಿರುವ ಹಲಸಿನ ಹಣ್ಣು ತುಂಬಾ ಹಣ್ಣಾಗಿದ್ದು ತಿನ್ ವರಿಕ್ಕಾ (‘thenvarikka’ ) ಜಾತಿಗೆ ಸೇರಿದ ಹಣ್ಣಾಗಿದೆ. ಇದರಲ್ಲಿ ಎಥನಾಲ್ ಎಂಬ ಅಂಶ ಕಂಡು ಬಂದ ಕಾರಣ ಆಲ್ಕೋಹಾಲ್ ಪಾಸಿಟಿವ್ ತೋರಿಸಿದ್ದು, ಈ ಜಾತಿಯ ಹಣ್ಣನ್ನು ಹಲಸಿನ ಹಣ್ಣಿನ ವೈನ್ ಮಾಡಲು ಸಹ ಉಪಯೋಗಿಸುತ್ತಾರೆ ಎಂದು ತಿಳಿದುಬಂದಿದೆ.

ಚರ್ರಿ ಹಣ್ಣು ತಿಂದರು ಆಲ್ಕೋಹಾಲ್ ಪಾಸಿಟೀವ್
ಕೇವಲ ಹಲಸಿನ ಹಣ್ಣು ಮಾತ್ರವಲ್ಲ ಚರ್ರಿ ಹಣ್ಣು ತಿಂದು ಡ್ರಿಂಕ್ ಅಂಡ್ ಡ್ರೈವ್ ಮಷಿನ್ನಲ್ಲಿ ಚೆಕ್ ಮಾಡಿದರೆ ಶೇಕಡ 40 ರಷ್ಟು ಆಲ್ಕೋಹಾಲ್ ಅಂಶವಿದೆ ಎಂದು ತೋರಿಸುತ್ತದೆ ಎನ್ನಲಾಗುತ್ತಿದೆ. ಜೊತೆಗೆ ವೈನ್ಗೆ ಬಳಸುವ ಕೆಲವೊಂದು ಹಣ್ಣುಗಳನ್ನು ಸೇವಿಸಿದಾಗ ಆಲ್ಕೋಹಾಲ್ ಇದೆ ಎಂಬುದು ತೋರಿಸುತ್ತದೆ ಎನ್ನಲಾಗುತ್ತಿದೆ.

You cannot copy content of this page