
ಹೌದು , ನಾಳೆಯಿಂದ ಏನೇ ವ್ಯವಹಾರಗಳಿದ್ದರೂ ಓನ್ಲಿ ಕ್ಯಾಶ್ ಮಾತ್ರ. ಮೋದಿಯವರ ಡಿಜಿಟಲ್ ಇಂಡಿಯಾ ಬಗ್ಗೆ ಮಾತನಾಡಿದ್ರು ಉಪಯೋಗವಾಗುವುದಿಲ್ಲ.ನಾಳೆಯಿಂದ ಎರಡು ದಿನ ಕಪ್ಪು ಪಟ್ಟಿ ಹಾಕಿಕೊಂಡು ವ್ಯಾಪಾರ ನಡೆಸಲಿದ್ದಾರೆ ರಾಜ್ಯದ ಕಾಂಡಿಮೆಂಟ್ಸ್, ಬೇಕರಿ ಹಾಗೂ ಕಾಫಿ , ಟೀ ಅಂಗಡಿ ವ್ಯಾಪಾರಸ್ಥರು. ಜೊತೆಗೆ ವ್ಯಾಪಾರ ಮಾಡುವ ವೇಳೆ ಕೇವಲ ನಗದನ್ನು ಸ್ವೀಕರಿಸುವ ನಿರ್ಧಾರ ಕೈಗೊಂಡಿದ್ದಾರೆ. ಕ್ಯಾಶ್ ಇಲ್ಲದೆ ಡಿಜಿಟಲ್ ವ್ಯವಹಾರ ನಡೆಸಲು ಅಂಗಡಿ ಕಡೆ ಹೋದರೆ ಸುಮ್ಮನೆ ವಾಪಸ್ಸಾಗೋದು ಗ್ಯಾರೆಂಟಿ.
ಇನ್ನು ನಾಳೆಯಿಂದ ಇನ್ನೆರಡು ದಿನ ಹಾಲು ಸಿಗೋದು ಡೌಟ್ ಜೊತೆಗೆ ತರಕಾರಿ ಹೂ ಹಣ್ಣು ಸಹ ಸಿಗೋದು ಸಹ ಅನುಮಾನ. ಸಣ್ಣಪುಟ್ಟ ಅಂಗಡಿಗಳು ಓಪನ್ ಆಗದೆ ದಿನಬಳಕೆ ವಸ್ತುಗಳಿಗೆ ಜನ ಪರದಾಡಿದ್ರೂ ಆಶ್ಚರ್ಯವಿಲ್ಲ. ವಾಣಿಜ್ಯ ಅಧಿಕಾರಿಗಳ ಟ್ಯಾಕ್ಸ್ ಟಾರ್ಚರ್ ವಿರುದ್ಧ ರಾಜ್ಯದ ವ್ಯಾಪಾರಸ್ಥರು ತಿರುಗಿ ಬಿದ್ದಿದ್ದಾರೆ. ಇನ್ನು ಜುಲೈ 25 ರಂದು ರಾಜ್ಯಾಧ್ಯಂತೆ ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಬ್ದವಾಗಿಲಿದೆ.