
ಪ್ರಕರಣವೊಂದರಲ್ಲಿ ಬಿ ರಿಪೋರ್ಟ್ ಹಾಕಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಸಬ್ ಇನ್ಸ್ಪೆಕ್ಟರ್ ಸಾವಿತ್ರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಬೆಂಗಳೂರಿನ ಗೋವಿಂದಪುರ ಪೊಲೀಸ್ ಠಾಣೆಯ ಪಿಎಸ್ಐ ಸಾವಿತ್ರಿ ದೂರುದಾರನ ಬಳಿ 1.25 ಲಕ್ಷ ಲಂಚ ಕೇಳಿದ್ದರಂತೆ.

ಈ ಬಗ್ಗೆ ಹೆಚ್ಆರ್ ಬಿಆರ್ ಲೇಜೌಟ್ ನಿವಾಸಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ದೂರನ್ನು ಆಧರಿಸಿ ಲೋಕಾಯುಕ್ತ ಲಂಚ ಪಡೆಯುತ್ತಿದ್ದ ವೇಳೆ ದಾಳಿ ನಡೆಸಿದ್ದಾರೆ. ಈ ವೇಳೆ ಮಹಿಳಾ ಪಿಎಸ್ಐ ಸಾವಿತ್ರಿ ಬಾಯಿಯನ್ನು ದುಡ್ಡಿನ ಸಮೇತ ಲೋಕಾಯುಕ್ತ ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ.