ವೈಭೋಗದ ಜೀವನಕ್ಕಾಗಿ ಕಳ್ಳನಾದ ಬಿ.ಟೆಕ್ ಪದವೀದರ!

ಹೌದು, ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆ ಐಷಾರಾಮಿ ಜೀವನಕ್ಕೆ ಜೋತು ಬಿದ್ದಿದ್ದು, ವೈಭೋಗದ ಜೀವನ ನಡೆಸಲು ಅಡ್ಡದಾರಿ ತುಳಿಯುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಅಂತಹದ್ದೇ ಒಂದು ಪ್ರಕರಣ ಇಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಬಿ.ಟೆಕ್ ವಿದ್ಯಾರ್ಹತೆ ಹೊಂದಿದ್ದು ಒಳ್ಳೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೂ ಸಹ ಶೋಕಿಗಾಗಿ ಕಳ್ಳತನ ಮಾಡುತ್ತಿದ್ದವ ಇಂದು ಪೊಲೀಸರ ಕೈಯಲ್ಲಿ ಸಿಕ್ಕಿಬಿದ್ದದ್ದು ಶ್ರೀ ಕೃಷ್ಣನ ಜನ್ಮ ಸ್ಥಾನದಲ್ಲಿ ಮುದ್ದೆ ಮುರಿಯುವಂತಾಗಿದೆ.
ಬೆಂಗಳೂರಿನ ರಿಚರ್ಡ್ ಎಂಬಾತ ಈ ರೀತಿ ವೈಭೋಗದ ಜೀವನಕ್ಕಿಳಿದು ಜೈಲುಪಾಲಾಗಿರುವ ವ್ಯಕ್ತಿಯಾಗಿದ್ದಾನೆ. ಈತನ ಚಿನ್ನದ ಅಂಗಡಿಗಳನ್ನು ಟಾರ್ಗೆಟ್ ಮಾಡುತ್ತಿದ್ದನಂತೆ. ಬ್ರಾಂಡೆಡ್ ಬಟ್ಟೆ , ಶೂ ಹಾಗೂ ವಾಚ್ ಧರಿಸುತ್ತಿದ್ದ ಇವನು ಗ್ರಾಹಕರ ಸೋಗಿನಲ್ಲಿ ಅಂಗಡಿಗಳಿಗೆ ಎಂಟ್ರಿ ಕೊಡುತ್ತಿದ್ದನಂತೆ. ಈ ವೇಳೆ ಮಾಲೀಕನ ಗಮನ ಬೆರೆಡೆ ಸೆಳೆದು ಕ್ಷಣಾರ್ಧದಲ್ಲಿ ಚಿನ್ನಭಾರಣ ಎಗರಿಸುತ್ತಿದ್ದನಂತೆ. ಇಂತಹ ಶೋಕಿಲಾಲ ಧರಿಸುತ್ತಿದ್ದ ವಾಚ್ನ ಬೆಲೆಯೇ 2 ಲಕ್ಷವಂತೆ. ಇಂತಹ ಬ್ರ್ಯಾಂಡೆಡ್ ಕಳ್ಳನ ಬೆನ್ನತ್ತಿದ್ದ ಮಲ್ಲೇಶ್ವರಂ ಪೊಲೀಸರು ಅಸಾಮಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.