ಸಮಗ್ರ ಸುದ್ದಿ

ನ್ಯಾಯಾಲಯದಲ್ಲಿ ನಕಲಿ ಶೂರಿಟಿ : ಆರೋಪಿಗಳು ಅಂದರ್!

Share It

ಹೌದು, ನ್ಯಾಯಾಲಯಗಳಲ್ಲಿ ನಕಲಿ ಶೂರಿಟಿ ನೀಡುತ್ತಿದ್ದ ಗ್ಯಾಂಗ್ ನ್ನು ಪೊಲೀಸರು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಈ ಆರೋಪಿಗಳನ್ನು ನ್ಯಾಯಾಲಯದ ಕಣ್ಣಿಗೆ ಮಣ್ಣು ಎರಚುತ್ತಿದ್ದರು ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.

ಈ ಸಂಬಂಧ ಬೆಂಗಳೂರಿನ ಹಲಸೂರು ಗೇಟ್ ಪೊಲೀಸರು ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಗೋವಿಂದರಾಜು, ಅರುಣ್, ರಾಜು, ಮಂಜುನಾಥ್, ಪ್ರವೀಣ್, ಹರೀಶ್, ಅಭಿಷೇಕ್ ಹಾಗೂ ದೇವರಾಜ್ ಬಂಧಿತರಾಗಿದ್ದಾರೆ. ಇವರಲ್ಲಿ ದೇವರಾಜ್ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದನಂತೆ. ಹೋಟೆಲ್ ಲಾಡ್ಜ್ಗಳಲ್ಲಿ ಕೆಲಸ ಮಾಡುವವರಿಗೆ ಹಣದ ಆಮಿಷ ತೋರಿಸಿ ಅವರಿಂದ ಆಧಾರ್ ಕಾರ್ಡ್ ಪಡೆದುಕೊಳ್ಳುತ್ತಿದ್ದನಂತೆ. ತದನಂತರ ಆಧಾರ್ ಕಾರ್ಡ್ ಗೆ ಅನುಗುಣವಾಗಿ ಪಹಣಿ ಅಥವಾ ಪಹಣಿಗೆ ಅನುಗುಣವಾಗಿ ಆಧಾರ್ ಕಾರ್ಡ್ ಸಿದ್ದಪಡಿಸುತ್ತಿದ್ದನಂತೆ.

ಶೂರಿಟಿ ನೀಡಿರುವ ಪ್ರಕರಣ ಟ್ರಯಲ್ಗೆ ಬಂದಾಗ ನಕಲಿ ಶೂರಿಟಿ ನೀಡಿರುವುದು ಪತ್ತೆಯಾಗಿದೆ. ಕೂಡಲೇ ಕಾರ್ಯೋನ್ಮುಕರಾಗಿರುವ ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸಿದ್ದು, ನಕಲಿ ಶೂರಿಟಿ ಖತರ್ನಾಕ್ ಗ್ಯಾಂಗ್ ಅಂದರ್ ಆಗಿದೆ. ಬಂಧಿತರಿಂದ 7 ಮೊಬೈಲ್, 1 ಪೆನ್ ಡ್ರೈವ್, 20 ಆಧಾರ್ ಕಾರ್ಡ್, ಪಹಣಿ ಮತ್ತು ಮ್ಯುಟೇಷನ್ ಸೇರಿ 120 ನಕಲಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

You cannot copy content of this page