ಅಪರಾಧ

ಸಿಬಿಐ ಸೋಗಿನಲ್ಲಿ ವೃದ್ಧ ದಂಪತಿ ಬಳಿ ಕೋಟಿ ಕೋಟಿ ಲೂಟಿ!

Share It

ಸಿಬಿಐ ಸೋಗಿನಲ್ಲಿ ವೃದ್ಧ ದಂಪತಿಗೆ ಡಿಜಿಟಲ್ ಅರೆಸ್ಟ್ ಮಾಡಿ ಕೋಟಿ ಕೋಟಿ ಲೂಟಿ ಮಾಡಿರುವ ಘಟನೆ ನಡೆದಿದೆ.

ಬೆಂಗಳೂರಿನ ಜೆಪಿ ನಗರದಲ್ಲಿ ಘಟನೆ ನಡೆದಿದ್ದು, ನೈಜೀರಿಯಾದಲ್ಲಿ ಇಂಜಿನಿಯರ್ ಕೆಲಸ ಮಾಡಿ ನಿವೃತ್ತಿ ಹೊಂದಿದ್ದ ವೃದ್ಧ ಮಂಜುನಾಥ್ ದಂಪತಿಗಳಿಗೆ ಈ ರೀತಿ ಮೋಸ ಮಾಡಲಾಗಿದೆ. ಈಶ್ವರ್ ಸಿಂಗ್ ಮತ್ತು ಪರಮೇಶ್ ಚರಣ್ ಕೋಟಿ ಕೋಟಿ ಲೂಟಿ ಮಾಡಿರುವ ಖತರ್ನಾಕ್ ಅಸಾಮಿಗಳಾಗಿದ್ದಾರೆ.

ಅಂದಹಾಗೆ ಈ ಸೈಬರ್ ಕಳ್ಳರು ಮೊದಲಿಗೆ ವೃದ್ಧ ದಂಪತಿಗಳಿಗೆ ಕರೆ ಮಾಡಿ ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್ ಓವರ್ ಡ್ಯೂ ಆಗಿದೆ ಎಂದು ತಿಳಿಸಿದ್ದಾರೆ. ತದನಂತರ ನಿಮ್ಮ ಅಕೌಂಟ್ ನಲ್ಲಿ ಮನಿ ಲಾಂಡರಿಂಗ್ ನಡೆದಿದೆ ಎಂದು ಬೆದರಿಸಿದ್ದಾರೆ. ಅಷ್ಟು ಮಾತ್ರವಲ್ಲ ಈ ಕೇಸ್ ನಲ್ಲಿ ನಿಮ್ಮನ್ನು ತಿಹಾರ್ ಜೈಲಿಗೆ ಕಳುಹಿಸುವುದಾಗಿ ವಾರೆಂಟ್ ಸಹ ಕಳುಹಿಸಿದ್ರಂತೆ. ಇದೇ ರೀತಿಯಾಗಿ ದಂಪತಿಗಳಿಂದ ಹಂತ ಹಂತವಾಗಿ 4 ಕೋಟಿ 79 ಲಕ್ಷ ಹಣ ಲೂಟಿ ಮಾಡಿದ್ದಾರೆ.

ಈ ಲೂಟಿ ಹಣ ಈಶ್ವರ್ ಸಿಂಗ್ ಮತ್ತು ನಾರಾಯಣ್ ಸಿಂಗ್ ಚೌಧರಿ ಅಕೌಂಟ್ ವರ್ಗಾವಣೆಯಾಗಿರುವುದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಆಗ್ನೇಯ ವಿಭಾಗದ ಸೆನ್ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ತನಿಖೆ ವೇಳೆ ಆರೋಪಿಗಳಿಗೂ ಶ್ರೀಲಂಕಾ ಕೆಸಿನೋಗು ನಂಟು ಇರುವುದು ಕಂಡುಬಂದಿದೆ. ಶ್ರೀಲಂಕಾದ ಕೆಸಿನೋದಲ್ಲಿ ಆರೋಪಿಗಳು ಆಟವಾಡಿರುವುದು ತಿಳಿದುಬಂದಿದೆ. ಡಿಜಿಟಲ್ ಅರೆಸ್ಟ್ ಆಗಿರುವವರ ಅಕೌಂಟ್ ನಂಬರ್ ನೀಡಿ ಕೆಸಿನೋಗೆ ಹಣ ಹಾಕಿಸಿರುವುದು ಪತ್ತೆಯಾಗಿದೆ.

You cannot copy content of this page