ಶಿಕ್ಷಣ ಸಮಗ್ರ ಸುದ್ದಿ

ರೇವಾ ವಿಶ್ವವಿದ್ಯಾಲಯದಲ್ಲಿ ಹತ್ತನೇ ಘಟಿಕೋತ್ಸವದಲ್ಲಿ 4679 ಮಂದಿಗೆ ವಿವಿಧ ಪದವಿ ಪ್ರದಾನ

Share It


ಬೆಂಗಳೂರು, ನವೆಂಬರ್ 27: ರೇವಾ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ಗುರುವಾರ ಹತ್ತನೇ ವಾರ್ಷಿಕ ಪದವಿಪ್ರದಾನ ಸಮಾರಂಭ ನಡೆಯಿತು. ಸಂಖ್ಯಾ ದೃಷ್ಟಿಯಿಂದಲೂ ಮಹತ್ವದ ಮೈಲುಗಲ್ಲು ಎನಿಸಿಕೊಂಡ ಕಾರ್ಯಕ್ರಮ ಇದಾಗಿತ್ತು. ಒಟ್ಟು 4679 ಮಂದಿ ವಿವಿಧ ಪದವಿಗಳ ಸ್ವೀಕಾರ ಮಾಡಿದರು. ಆ ಪೈಕಿ 3409 ಪದವಿ, 1194 ಸ್ನಾತಕೋತ್ತರ ಪದವಿ ಹಾಗೂ 77 ಪಿಎಚ್.ಡಿ., ಪ್ರದಾನ ಮಾಡಲಾಯಿತು. ಈ ಎಲ್ಲರೂ ಅಧಿಕೃತವಾಗಿ ತಮ್ಮ ಪದವಿಗಳನ್ನು ಸ್ವೀಕರಿಸಿದರು. ಇದರ ಜೊತೆಗೆ ಎಪ್ಪತ್ತು ಪ್ರತಿಭಾನ್ವಿತರಿಗೆ ಚಿನ್ನದ ಪದಕವನ್ನು ನೀಡಿ, ಗೌರವಿಸಲಾಯಿತು. ಈ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ತೋರಿದ ಅದ್ಭುತ ಸಾಧನೆಯನ್ನು ಗುರುತಿಸಿ, ಚಿನ್ನದ ಪದಕವನ್ನು ಪ್ರದಾನ ಮಾಡಲಾಯಿತು. ವಿದ್ಯಾರ್ಥಿಗಳು ಬಹಳ ಉತ್ಸಾಹದಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಇನ್ನು ವಿದ್ಯಾರ್ಥಿಗಳ ಪೋಷಕರು, ಬೋಧಕ ಸಿಬ್ಬಂದಿ, ರೇಬಾ ಸಮುದಾಯದ ಸದಸ್ಯರು ಎಲ್ಲರೂ ಜೊತೆ ಸೇರಿ ಕಾರ್ಯಕ್ರಮದ ಕಳೆ ಹೆಚ್ಚಿಸಿದರು. ರೇವಾ ಸಂಸ್ಥೆಯ ಕಾರಣವಾಗಿ ಎಲ್ಲರ ಮುಖದಲ್ಲಿ ಹೆಮ್ಮೆ, ಸಾಧನೆಯ ಸ್ಫೂರ್ತಿ ಎದ್ದು ಕಾಣುತ್ತಿತ್ತು.

ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಾದ ಶಿವರಾಜ್ ವಿ. ಪಾಟೀಲ್ ಅವರು ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಪದವಿ ಪ್ರಮಾಣದ ಭಾಷಣ ಮಾಡಿದ ಅವರು ಸ್ಫೂರ್ತಿ ತುಂಬುವಂಥ ಮಾತುಗಳನ್ನು ಆಡಿದರು. ಪದವಿ ಪಡೆದುಕೊಂಡ ವಿದ್ಯಾರ್ಥಿಗಳು ತಮ್ಮಲ್ಲಿ ಪ್ರಶ್ನೆ ಕೇಳಿಕೊಳ್ಳುವ ಉತ್ಸಾಹ- ಚೈತನ್ಯವನ್ನು ಉಳಿಸಿಕೊಳ್ಳಿ. ಅದರಲ್ಲೂ “ಮೂರು ಜಾದೂ ಪ್ರಶ್ನೆಗಳು” ಕೇಳಿಕೊಳ್ಳಲೇಬೇಕು: ಮುಂದೆ ಏನು? ಬೇರೆ ಏನು ಬಾಕಿ ಇದೆ? ಇನ್ನೂ ಹೆಚ್ಚು ಏನು ಬೇಕಿದೆ? ಈ ಮೂರು ಪ್ರಶ್ನೆಗಳು ಕುತೂಹಲ, ಮಹತ್ವಾಕಾಂಕ್ಷೆ ಹಾಗೂ ನಿರಂತರ ಸುಧಾರಣೆಯನ್ನು ನಿಮ್ಮಲ್ಲಿ ರೂಢಿಸುತ್ತದೆ. ಜಗತ್ತಿನಲ್ಲಿ ಬದಲಾವಣೆ ತರುವುದರಲ್ಲಿ ಯಶಸ್ಸು ಪಡೆಯುವುದಕ್ಕೆ ಈ ಗುಣಗಳು ಬಹಳ ಮುಖ್ಯ ಎಂದರು.

ಇನ್ನೂ ಮುಂದುವರಿದು, ಮೂರು ‘ಎಚ್’ಗಳ ಪ್ರಾಮುಖ್ಯವನ್ನು ಸಹ ಒತ್ತಿ ಹೇಳಿದರು. ಕಠಿಣ ಪರಿಶ್ರಮ (ಹಾರ್ಡ್ ವರ್ಕ್), ಪ್ರಾಮಾಣಿಕತೆ (ಆನೆಸ್ಟಿ) ಹಾಗೂ ವಿನಮ್ರತೆ (ಹ್ಯುಮಿಲಿಟಿ) ಇದು ಬಹಳ ಮುಖ್ಯ. ಈ ಮೌಲ್ಯಗಳು ಉದ್ದೇಶ ಹಾಗೂ ದೈವತ್ವದ ಮಾರ್ಗದರ್ಶನ ಪಡೆದುಕೊಂಡಲ್ಲಿ ನೈತಿಕವಾಗಿ ಗಟ್ಟಿಯಾಗಿ ನಿಲ್ಲುವಂತೆ ವ್ಯಕ್ತಿಗಳನ್ನು ಇವು ಸಬಲಗೊಳಿಸುತ್ತವೆ ಎಂದರು. ಇನ್ನು ಮುಂದಿನ ಬದುಕಲ್ಲಿ ಸಮಾಜಕ್ಕೆ ನೀಡುವ ಕೊಡುಗೆ, ಸಮಗ್ರತೆ ಹಾಗೂ ಸೇವೆಗೆ ನಿದರ್ಶನವಾಗಿ ವಿದ್ಯಾರ್ಥಿಗಳ ಕೆಲಸ- ಕಾರ್ಯಗಳು ಕಾಣುವಂತೆ ಆಗಲಿ ಎಂದು ಶಿವರಾಜ್ ಪಾಟೀಲ್ ಅವರು ಹುರಿದುಂಬಿದರು.

ಹೃದಯ ತುಂಬಿದ ಶುಭ ಕಾಮನೆಗಳನ್ನು ಹೇಳಿದಂಥ ರೇವಾ ವಿಶ್ವವಿದ್ಯಾಲಯದ ಕುಲಪತಿ ಡಾ.ಪಿ.ಶ್ಯಾಮರಾಜು ಅವರು ಮಾತನಾಡಿ, ವಿದ್ಯಾರ್ಥಿಗಳು ವಿಶ್ವಾಸದಿಂದ ಕೂಡಿದ ನಾಯಕರು ಹಾಗೂ ಜವಾಬ್ದಾರಿಯುತ ನಾಗರಿಕರಾಗಿ ಹೊರಹೊಮ್ಮಿದಾಗ ನೋಡುವುದಕ್ಕೆ ಹೆಮ್ಮೆ ಆಗುತ್ತದೆ. “ರೇವಾದಲ್ಲಿ ಶಿಕ್ಷಣ ಅಂದರೆ ಪದವಿ ಪಡೆಯುವುದು ಮಾತ್ರ ಅಲ್ಲ- ಬದುಕಿಗಾಗಿ ಪಾಠ ಕಲಿಯುವುದಾಗಿದೆ,” ಎಂದರು. ವಿಶ್ವವಿದ್ಯಾಲಯ ಮಾರ್ಗದರ್ಶನ ಮಾಡುವಂಥ ಸಿದ್ಧಾಂತವಾದ ಎಜುಕೇಟ್ ಟು ಎಂಟರ್ ಪ್ರೈಸ್ ಬಗ್ಗೆ ಒತ್ತಿಹೇಳಿದರು. ಅದರ ಜೊತೆಗೆ ನಾವೀನ್ಯಕಾರರು, ಉದ್ಯಮಿಗಳು ಹಾಗೂ ಭವಿಷ್ಯವನ್ನು ರೂಪಿಸುವಥ ಸಾಮರ್ಥ್ಯ ಇರುವ ವೃತ್ತಿಪರರನ್ನು ಪೋಷಿಸುವುದಕ್ಕೆ ರೇವಾದ ಬದ್ಧತೆ ಬಗ್ಗೆ ಮಾತನಾಡಿದರು.

ರೇವಾದಲ್ಲಿ ವಿದ್ಯಾರ್ಥಿಗಳಲ್ಲಿ ಶಿಸ್ತು, ಮಾನವೀಯ ಮೌಲ್ಯಗಳು ಮತ್ತು ಗಟ್ಟಿತನವನ್ನು ತುಂಬವನ್ನು ಬೋಧಕ ಸಿಬ್ಬಂದಿ ಹಾಗೂ ಮಾರ್ಗದರ್ಶಕರ ಪಾತ್ರದ ಪ್ರಾಮುಖ್ಯದ ಬಗ್ಗೆ ಹೇಳಿದರು. ಪದವಿ ಪಡೆದವರು ರೇವಾದ ನೈತಿಕ ಮೌಲ್ಯಗಳನ್ನು ಸಂಸ್ಥೆಯ ರಾಯಭಾರಿಗಳಂತೆ ಮುಂದಕ್ಕೆ ಒಯ್ಯಲು ಪ್ರೋತ್ಸಾಹಿಸಿದರು. “ನೀವೆಲ್ಲ ಈಗ ಜ್ಞಾನ ಹಾಗೂ ಮೌಲ್ಯಗಳ ಪಂಜಿನಂತೆ. ಹಳೇ ವಿದ್ಯಾರ್ಥಿಗಳಾದ ನೀವು ಭವಿಷ್ಯದ ತಲೆಮಾರುಗಳನ್ನು ಉತ್ತೇಜಿಸುವುದು ಮುಂದುವರಿಸುತ್ತೀರಿ ಹಾಗೂ ಉತ್ತಮ ಸಮಾಜದ ನಿರ್ಮಾಣಕ್ಕೆ ಕೊಡುಗೆ ನೀಡುತ್ತೀರಿ ಎಂಬ ಭರವಸೆ ಇದೆ,” ಎಂದು ಶ್ಯಾಮರಾಜು ಅವರು ಹೇಳಿದರು.

ಈ ಕಾರ್ಯಕ್ರಮದಲ್ಲಿ ರೇವಾದ ಪ್ರೊ ಚಾನ್ಸಲರ್ ಉಮೇಶ್ ಎಸ್. ರಾಜು, ಉಪ ಕುಲಪತಿ ಡಾ ಸಂಜಯ್ ಆರ್. ಚಿಟ್ನಿಸ್, ರಿಜಿಸ್ಟ್ರಾರ್ ಡಾ. ಎಂ. ಧನಂಜಯ, ರಿಜಿಸ್ಟ್ರಾರ್ (ಮೌಲ್ಯಮಾಪನ) ಡಾ ಬೀನಾ ಜಿ., ಇವರ ಜೊತೆಗೆ ಟ್ರಸ್ಟಿಗಳು, ಬೋರ್ಡ್ ಆಫ್ ಗವರ್ನರ್ಸ್, ಬೋರ್ಡ್ ಆಫ್ ಮ್ಯಾನೇಜ್ ಮೆಂಟ್ ಸದಸ್ಯರು, ಅಕೆಡಮಿಕ್ ಕೌನ್ಸಿಲ್, ರೇವಾದ ಎಂಡೋಮೆಂಟ್ ಚಿನ್ನದ ಪದಕಗಳ ದಾನಿಗಳು ಹಾಗೂ ಬೋಧಕ ಸದಸ್ಯರು ಹಾಜರಿದ್ದರು.

ಎಂಜಿನಿಯರಿಂಗ್, ಆರ್ಕಿಟೆಕ್ಚರ್, ಕಾಮರ್ಸ್, ತಂತ್ರಜಜ್ಞಾನ, ಕಾನೂನು, ಮ್ಯಾನೇಜ್ ಮೆಂಟ್, ಡಿಸೈನ್, ಲಿಬರಲ್ ಆರ್ಟ್ಸ, ಪರ್ಫಾರ್ಮಿಂಗ್ ಆರ್ಟ್ಸ್ ಅಂಡ್ ಇಂಡಿಕ್ ಸ್ಟಡೀಸ್, ಸಮಾಜ ವಿಜ್ಞಾನಗಳು, ಅಲೈಡ್ ಹೆಲ್ತ್ ಸೈನ್ಸಸ್, ಮತ್ತು ಅಪ್ಲೈಡ್ ಸೈನ್ಸಸ್- ವಿವಿಧ ವಿಷಯಗಳಲ್ಲಿ ಪದವಿ ಪಡೆದರು.

You cannot copy content of this page