
ಹೌದು, ಈ ಹಿಂದೆ ಆಸ್ತಿ ಮಾರಾಟಕ್ಕೆ ಇ ಖಾತಾ ಕಡ್ಡಾಯಗೊಳಿಸಲಾಗಿತ್ತು. ಆದರೆ ಇದೀಗ ಕಟ್ಟಡ ನಿರ್ಮಾಣಕ್ಕೂ ಸಹ ಇ ಖಾತಾ ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ.

ಜೊತೆಗೆ ಎಲ್ಲಾ ಕಟ್ಟಡಗಳ ಅನುಮತಿಗೂ ಇ ಖಾತಾ ಕಡ್ಡಾಯಗೊಳಿಸಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಆಸ್ತಿಗಳಿಗೆ ಈ ಆದೇಶ ಅನ್ವಯವಾಗಲಿದ್ದು, ಜುಲೈ 1 ರಿಂದ ಈ ಆದೇಶ ಚಾಲ್ತಿಯಾಗಲಿದೆ. ಕಟ್ಟಡ ನಕ್ಷೆ ಮಂಜೂರಿಗೂ ಇ ಖಾತಾ ಕಡ್ಡಾಯ ಎಂದು ಬಿಬಿಎಂಪಿ ಕಮೀಷನರ್ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
