ರಾಜಕೀಯ ಸಮಗ್ರ ಸುದ್ದಿ

2026 ಕ್ಕೆ ಗ್ರೇಟರ್ ಬೆಂಗಳೂರು ಚುನಾವಣೆ?

Share It

ಜಿಬಿಎ ಚುನಾವಣೆಗೆ ರಾಜ್ಯ ಚುನಾವಣೆ ಆಯೋಗ ಸಿದ್ಧತೆ ಆರಂಭಿಸಿರುವ ಮುನ್ಸೂಚನೆ ನೀಡಿದ್ದು, ಇದರಿಂದ 2026ರಲ್ಲಾದರೂ ನಡೆಯುತ್ತಾ ಗ್ರೇಟರ್ ಬೆಂಗಳೂರು ಸ್ಥಳೀಯ ಆಡಳಿತಕ್ಕೆ ಚುನಾವಣೆ ನಡೆಯಲಿದೆ ಎನ್ನಲಾಗುತ್ತಿದೆ. ಈ ನಿಟ್ಟಿನಲ್ಲಿ 2026 ರಲ್ಲಿ ಜಿಬಿಎ ಚುನಾವಣೆ ಸುಳಿವು ರಾಜ್ಯ ಚುನಾವಣಾ ಆಯೋಗ ನೀಡಿದೆ.

ಜಿಬಿಎ ಚುನಾವಣೆಗೆ ರಾಜ್ಯ ಚುನಾವಣೆ ಆಯೋಗ ಸಿದ್ಧತೆ ಆರಂಭಿಸಿದ್ದು, ಜಿಬಿಎ ಮುಖ್ಯ ಆಯುಕ್ತರನ್ನು ಜಿಲ್ಲಾ ಚುನಾವಣಾಧಿಕಾರಿಯಾಗಿ ನೇಮಿಸಿ ಅಧಿಸೂಚನೆ ಹೊರಡಿಸಿದೆ. ಇನ್ನು ಐದು ಪಾಲಿಕೆಗಳ ಆಯುಕ್ತರನ್ನು ಅಪರ ಜಿಲ್ಲಾ‌ ಚುನಾವಣಾಧಿಕಾರಿಯಾಗಿ ನೇಮಿಸಿ ರಾಜ್ಯ ಚುನಾವಣಾ ಆಯೋಗದಿಂದ ಆದೇಶ ಹೊರಡಿಸಿದೆ.

ನವೆಂಬರ್ 1 ರಿಂದ 368 ವಾರ್ಡ್ ವಾರು ಮತಪಟ್ಟಿ ಸಿದ್ಧಪಡಿಸಲು ಸುತ್ತೋಲೆ ಸಹ ಹೊರಡಿಸಿದೆ. 2025, ಜನವರಿ 6 ರಂದು ಪ್ರಕಟಗೊಂಡಿರುವ ವಿಧಾನಸಭಾವಾರು ಮತಪಟ್ಟಿ ಆಧರಿಸಿ ಹೊಸ ಮತಪಟ್ಟಿ ಸಿದ್ಧತೆಗೆ ಸೂಚನೆ ನೀಡಲಾಗಿದೆ.

ಜೊತೆಗೆ ರಾಜ್ಯ ಚುನಾವಣಾ ಆಯೋಗ ಮತದಾರರ ಅಂತಿಮ ಪಟ್ಟಿ ಪ್ರಕಟಣೆಗೆ ಜನವರಿ 29, 2026ರ ಗಡುವು ನೀಡಿದೆ.

You cannot copy content of this page