
ಹೌದು, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಬೂದಿಗೆರೆ ಕ್ರಾಸ್ ನಿಂದ ಮೈಲನಹಳ್ಳಿಯವರೆಗಿನ ರಸ್ತೆ ಕಾಮಗಾರಿ ಕಳೆದ 8 ವರ್ಷಗಳಿಂದ ಕುಂಟುತ್ತಾ ಸಾಗಿದ್ದು, ಏರ್ಪೋರ್ಟ್ ಗೆ ತೆರಳುವ ವಾಹನ ಸವಾರರು ಸೇರಿದಂತೆ ಸ್ಥಳೀಯ ಸವಾರರು ದಿನನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.

ಇದರಿಂದ ರೊಚ್ಚಿಗೆದ್ದಿರುವ ಬೂದಿಗೆರೆ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ರಸ್ತೆ ಕಾಮಗಾರಿ ಕೈಗೆತ್ತಿಕೊಂಡಿರುವ ಕೆಆರ್ ಡಿಸಿಎಲ್ ವಿರುದ್ಧ ಇಂದು ಅನಿರ್ಧಿಷ್ಟಾವದಿ ಪ್ರತಿಭಟಣೆ ಹಮ್ಮಿಕೊಂಡಿದ್ದಾರೆ.
ರಸ್ತೆ ಅವ್ಯವಸ್ಥೆ ವಿರುದ್ಧ ಪ್ರತಿಭಟನೆ ನಡೆಸಲು ನಿರ್ಧರಿಸಿರುವ ಇಂದೇ ಏರ್ಪೋರ್ಟ್ ರಸ್ತೆಯ ಮಂಚಪ್ಪನಹಳ್ಳಿ ಗೇಟ್ ಬಳಿ ಅಪಘಾತವೊಂದು ಸಂಭವಿಸಿದೆ. ದ್ವಿಚಕ್ರ( KA03H7096)ವಾಹನವೊಂದು ಗುಂಡಿ ತಪ್ಪಿಸಲು ಹೋಗಿ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರರಿಗೆ ಗಂಭೀರ ಗಾಯಗಳಾಗಿವೆ. ಇನ್ನು ದ್ವಿಚಕ್ರ ವಾಹನದ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ವಾಹನ ಸವಾರರ ವಿಳಾಸ ತಿಳಿದುಬಂದಿಲ್ಲ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.