
57 ಲಕ್ಷ ರೂಪಾಯಿ ಚಿಲ್ಲರೆ ಸಾಗಿಸುತ್ತಿದ್ದ ಲಾರಿ ಪಲ್ಟಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆದಿದೆ. ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ರಾಯರಪಾಳ್ಯ ಗೇಟ್ ಬಲಿ ಅವಘಡ ಸಂಭವಿಸಿದ್ದು, ಅದೃಷ್ಟವಶಾತ್ ಲಾರಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಬೆಂಗಳೂರಿನ ರಿಸರ್ವ್ ಬ್ಯಾಂಕ್ನಿಂದ ನಾಣ್ಯಗಳನ್ನು ರಾಯಚೂರಿಗೆ ಸಾಗಿಸುತ್ತಿದ್ದ ಮಾರ್ಗ ಮಧ್ಯದಲ್ಲಿ ಘಟನೆ ನಡೆದಿದೆ. ಒಂದು ಹಾಗು ಎರಡು ರೂಪಾಯಿ ಮುಖ ಬೆಲೆ ಸುಮಾರು 57 ಲಕ್ಷ ರೂಪಾಯಿ ಲಾರಿಯಲ್ಲಿತ್ತು ಎನ್ನಲಾಗಿದೆ. ರಸ್ತೆ ಪಕ್ಕದಲ್ಲಿ ನಿಲ್ಲಿಸುವ ವೇಳೆ ದಿಬ್ಬ ಕುಸಿದು ಲಾರಿ ಹಳ್ಳಕ್ಕೆ ಪಲ್ಟಿಯಾಗಿದ್ದು, ನೆಲಮಂಗಲ ಸಂಚಾರಿ ಪೊಲೀಸರು ಕ್ರೇನ್ ಬಳಸಿ ಲಾರಿಯನ್ನು ಮೇಲೆತ್ತಿದ್ದಾರೆ.